ಒಂದೇ ಬಳಕೆದಾರ ಹೆಸರನ್ನು ಅಂತಿಮಗೊಳಿಸಲು ಪ್ರಕಟಣೆ ಘೋಷಣೆ
This page is kept for historical interest. Any policies mentioned may be obsolete. If you want to revive the topic, you can use the talk page or start a discussion on the community forum. |
ಬಳಕೆದಾರರಿಗೆ ಕ್ರಾಸ್-ವಿಕಿ ಸೂಚನೆಗಳಂತಹ ಹೊಸ ಮತ್ತು ಉತ್ತಮ ಸಲಕರಣೆಗಳನ್ನು ಒದಗಿಸಲು ನಿರಂತರವಾಗಿ ಪರಿಶ್ರಮಿಸುತಿರುವ ವಿಕಿಮೀಡಿಯದ ಅಭಿವರ್ಧಕ ತಂಡವು ಬಳಕೆದಾರರ ಖಾತೆಗಳು ಕೆಲಸ ಮಾಡುವ ಕ್ರಿಯೆಯನ್ನು ಸ್ವಲ್ಪ ಬದಲಾವಣೆ ಮಾಡಲಿದ್ದಾರೆ. ಈ ಬದಲಾವಣೆಗಳನ್ನು ಆಶ್ರಯಿಸಲು ಬಳಕೆದಾರರು ಒಂದೇ ಖಾತೆ ಎಲ್ಲೆಡೆ ಇರಬೇಕು ಸವಲತ್ತುಗಳನ್ನು ಹೊಂದಿರಬೇಕು . ಇದರಿಂದಾಗಿ ನೀವು ಇನ್ನು ಹೆಚ್ಚು ಉತ್ತಮವಾಗಿ ಸಂಪಾದಿಸಲು ಮತ್ತು ಚರ್ಚಿಸಲು ಅವಕಾಶ ನೀಡುತ್ತದೆ, ಹಾಗು ಬಳಕೆದಾರರ ಪರವಾನಗಿಗಳನ್ನು ಇನ್ನು ಹೆಚ್ಚಿಸುತ್ತದೆ. ಇದ್ದಕ್ಕಿರುವ ಪೂರ್ವ ಷರತ್ತೆಂದರೆ ಬಳಕೆದಾರರ ಖಾತೆಯೂ ೯೦೦ ವಿಕಿಮೀಡಿಯ ವಿಕಿಯಲ್ಲಿ ಒಂದೇ ಆಗಿರಬೇಕಾಗುತ್ತದೆ.
ದುರದೃಷ್ಟದವಷಾತ್, ಕೆಲವು ಖಾತೆಗಳು ನಮ್ಮ ಎಲ್ಲ ವಿಕಿಗಳಲ್ಲಿ ಅನನ್ಯವಾಗಿರದೇ ಬೇರೆ ಖಾತೆಗಳೊಂದಿಗೆ ಘರ್ಷಶಿಸುತ್ತವೆ. ಭವಿಷ್ಯದಲ್ಲಿ ಎಲ್ಲ ಬಳಕೆದಾರರು ವಿಕಿಮೀಡಿಯದ ವಿಕಿಗಳನ್ನು ಬಳಸುವಂತಿರಲು, ನಾವು ಹಲವಾರು ಖಾತೆಗಳನ್ನು “~
” ಹೊಂದುವಂತೆ ಮರು ನಾಮಕರಣ ಮಾಡಿ, ಖಾತೆಯ ಹೆಸರನ್ನು ಅವರ ವಿಕಿಯ ಹೆಸರಿನೊಂದಿಗೆ ಜೋಡಿಸುತಿದ್ದೇವೆ. ""ಈ ಬದಲಾವಣೆಗಳು ಆಗಸ್ಟ್ ೨೦೧೫ ರಲ್ಲಿ ಅನ್ವಯಿಸುತ್ತವೆ"". ಉದಾಹರಣೆಗೆ , "Example" ಎಂಬ ಬಳಕೆದಾರನ ಖಾತೆಯನ್ನು, ಸ್ವೀಡಿಷ್ wikitionary ಯಲ್ಲಿ "Example ~svwiktionary” ಎಂದು ಮರುನಾಮಕರಣಗೊಳಿಸಲಾಗುತ್ತದೆ.
ಎಲ್ಲ ಖಾತೆಗಳು ಮೊದಲಿನಂತೆ ನಿರ್ವಹಿಸುತ್ತವೆ, ಹಾಗು ಅವರ ಸಂಪಾದನೆಗಳಿಗೆ ಅವರ ಹೆಸರನ್ನು ಕೊಡಲಾಗುತ್ತದೆ. ಆದರೆ ಮರುನಾಮಕರಣಗೊಂಡ ಖಾತೆಗಳ ಬಳಕೆದಾರರು (ಯಾರನ್ನು ನಾವು ಖುದ್ದಾಗಿ ಸಂಪರ್ಕಿಸುತ್ತೇವೆಯೋ) ಹೊಸ ಖಾತೆಯನ್ನು ಲಾಗಿನ್ ಮಾಡಲು ಬಳಸಬೇಕಾಗುತ್ತದೆ .
ಜಾಗತಿಕವಾಗಿ ಬಳಕೆದಾರರ ಖಾತೆಗಳು ಸ್ಥಳೀಯ ಹೆಸರಿನ ಬದಲಾವಣೆಯಿಂದ ತೊಂದರೆಗೊಳಗಾಗುವುದನ್ನು ತಪ್ಪಿಸಲು ಸ್ಥಳೀಯ ಮರುನಾಮಕರಣವನ್ನು ತೆಗೆದುಹಾಕಲಾಗಿದೆ. ಬಳಕೆದಾದರು ತಮ್ಮ ಸ್ಥಳೀಯ ವಿಕಿಯಲ್ಲಿ Special:GlobalRenameRequest ಬಳಸಿ ಮರುನಾಮಕರಣಕ್ಕೆ ಮನವಿ ಮಾಡಬಹುದು ಅಥವಾ ಮೆಟಾದಲ್ಲಿ ಖಾತೆಯ ಹೆಸರಿನ ಮರುನಾಮಕರಣಕ್ಕೆ ಕೇಳಿ, ಹೊಸ ಬಳಕೆದಾರರ ಹೆಸರು ಇಷ್ಟವಾಗದ ಪಕ್ಷದಲ್ಲಿ.