ಮೂವ್ಮೆಂಟ್ ಚಾರ್ಟರ್/ವಿಷಯ

This page is a translated version of the page Movement Charter/Content and the translation is 98% complete.

ಈ ಪುಟವು ಮೂವ್ಮೆಂಟ್ ಚಾರ್ಟರ್‌ನ ವಿಷಯ ರೂಪರೇಖೆ ಯನ್ನು ಎತ್ತಿ ತೋರಿಸುತ್ತದೆ. ಈ ವಿಷಯವು 2024 ರಲ್ಲಿ ನಡೆಯುವ ನಿರೀಕ್ಷೆಯಿರುವ ಮೂವ್ಮೆಂಟ್ ಚಾರ್ಟರ್ ದೃಢೀಕರಿಸಲಾಗಿದೆ ಅಲ್ಲಿಯವರೆಗೆ ಇದು ಬದಲಾಗುತ್ತಲೇ ಇರುತ್ತದೆ.

ಪ್ರಸ್ತುತ ಕರಡುಗಳು

ಈ ಕರಡುಗಳನ್ನು ೨ ಏಪ್ರಿಲ್, ೨೦೨೪ ರಂದು ಹಂಚಿಕೊಳ್ಳಲಾಗಿದೆ.

ಪೂರಕ ದಾಖಲೆಗಳು

ವಿವರಣಾತ್ಮಕ ವೀಡಿಯೊಗಳು

ಐತಿಹಾಸಿಕ

ಈ ವಿಭಾಗವು ಮೇ 2022 ರಂತೆ ಮೂವ್‌ಮೆಂಟ್ ಚಾರ್ಟರ್ ಡ್ರಾಫ್ಟಿಂಗ್ ಕಮಿಟಿ ನಿಂದ ಚಾರ್ಟರ್ ವಿಷಯವನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದರ ಪ್ರಾಥಮಿಕ ನಿರೂಪಣೆಯನ್ನು ಒಳಗೊಂಡಿದೆ

Extended content

ಚಾರ್ಟರ್ ವಿಷಯ ವಿವರಣೆ

ಮೂವ್ ಮೆಂಟ್ ಚಾರ್ಟರ್ ತನ್ನ ಮುನ್ನುಡಿಯಾಗಿ ಮೌಲ್ಯಗಳ ಹೇಳಿಕೆಯನ್ನು ಹೊಂದಿದೆ, ಇದು ವಿಶಾಲವಾದ ಪರಿಭಾಷೆಯಲ್ಲಿ ನಾವು ಇಷ್ಟಪಡುವ ಎಲ್ಲವನ್ನೂ ಸಂಕ್ಷಿಪ್ತಗೊಳಿಸುತ್ತದೆ ಮತ್ತು ನಿರರ್ಗಳವಾಗಿ ವ್ಯಕ್ತಪಡಿಸುತ್ತದೆ.

ವಾಸ್ತವಿಕ ನೀತಿಗಳನ್ನು ಚಾಲನೆ ಮಾಡುವ ಕಾರ್ಯಸಾಧ್ಯವಾದ ವಸ್ತುಗಳನ್ನು ಸಂಭಾವ್ಯ ಕಲ್ಪನೆಗಳ ವಿಶಾಲ ವ್ಯಾಪ್ತಿಯಿಂದ ಸೆಳೆಯಬಹುದು ಮತ್ತು ಮೂರು ವಿಭಾಗಗಳಾಗಿ ಅಥವಾ ಬಕೆಟ್‌ಗಳಾಗಿ ವಿಂಗಡಿಸಬಹುದು: ಆಡಳಿತ, ಸಂಪನ್ಮೂಲಗಳು ಮತ್ತು ಸಮುದಾಯ . ಇವುಗಳನ್ನು (1) ರಾಜಕೀಯ, (2) ಆರ್ಥಿಕ ಮತ್ತು (3) ಸಾಮಾಜಿಕ/ಮಾಹಿತಿ ಡೊಮೇನ್‌ಗಳಲ್ಲಿ ಪಾತ್ರವಹಿಸುವ ಮೂಲಭೂತ ಕಾರ್ಯವಿಧಾನಗಳಾಗಿಯೂ ಕಲ್ಪಿಸಿಕೊಳ್ಳಬಹುದು ಮತ್ತು ಅವು ಪಾತ್ರಗಳನ್ನು ವಿಭಜಿಸಲು ಅತ್ಯಂತ ಕ್ರಿಯಾತ್ಮಕ ಮಾರ್ಗವಾಗಿದೆ.ಹಿಂದಿನ ಹಂತಗಳ ಪ್ರಸ್ತಾಪಗಳು ಮತ್ತು ಸಮುದಾಯಗಳಿಂದ ಹೊಸ ಪ್ರಸ್ತಾಪಗಳು ಸೇರಿದಂತೆ, ನೀತಿಯ ಮೇಲೆ ನೇರ ಪರಿಣಾಮ ಬೀರುವ ಎಲ್ಲಾ ಸಂಭಾವ್ಯ ಆಲೋಚನೆಗಳು ಮತ್ತು ಪ್ರಸ್ತಾವನೆಗಳನ್ನು ಈ ವರ್ಗಗಳಲ್ಲಿ ಒಂದಕ್ಕೆ ವಿಂಗಡಿಸಲಾಗುತ್ತದೆ,

ಪ್ರತಿಯೊಂದು ವಿಭಾಗಗಳು ಅಥವಾ ಬಕೆಟ್ಗಳನ್ನು ಎಂಸಿಡಿಸಿಯು ಹಿಂದಿನ ಹಂತಗಳಿಂದ ಪಡೆದ ಅತ್ಯುತ್ತಮ ಮತ್ತು ವಿಶಾಲವಾದ ವಿಚಾರಗಳೊಂದಿಗೆ ಮತ್ತು ಎಂಸಿಡಿಸಿಯ ಸ್ವಂತ ಚರ್ಚೆಗಳೊಂದಿಗೆ ಬೀಜವನ್ನು ಹಾಕುತ್ತದೆ. ಮೆಟಾ-ವಿಕಿ ವಿಷಯ-ವರ್ಗದ ಉಪಪುಟದಲ್ಲಿ ಮತ್ತು ಇತರ ವೇದಿಕೆಗಳ ಮೂಲಕ ಸಮುದಾಯದ ಸದಸ್ಯರಿಂದ ವಿಮರ್ಶೆ, ಸ್ಪಷ್ಟೀಕರಣ ಮತ್ತು ಹೊಸ ಪ್ರಸ್ತಾಪಗಳಿಗೆ ಅವಕಾಶವಿರುತ್ತದೆ.

ರೂಪರೇಖೆ

2022ರ ಜೂನ್ ನಲ್ಲಿ ನಡೆದ ವೈಯಕ್ತಿಕ ಸಭೆಯ ನಂತರ, ಎಂಸಿಡಿಸಿ ಮೂವ್ ಮೆಂಟ್ಸ ಚಾರ‌ಟರಿನ ಸ್ಥೂಲ ರೂಪರೇಖೆ ಅಥವಾ "ವಿಷಯಗಳ ಪಟ್ಟಿ" ಯನ್ನು ಒಪ್ಪಿಕೊಂಡಿತು. ಒಪ್ಪಿಕೊಂಡ ರೂಪರೇಖೆಯು ಈ ಕೆಳಗಿನಂತಿದೆಃ

 
ಮೂವ್ ಮೆಂಟ್ ಚಾರ್ಟರ್‌ನ ನಿರೂಪಣೆಯ "ಸಮುದಾಯ" ಪ್ರದೇಶದ ಕರಡು ದೃಶ್ಯೀಕರಣ (ಸಮಿತಿಯ ಜೂನ್ 2022 ರಲ್ಲಿ ವೈಯಕ್ತಿಕ ಸಭೆಯಿಂದ).
ಅಧ್ಯಾಯ ವಿಷಯದ ವಿವರಣೆ
ಮುನ್ನುಡಿ ಚಾರ್ಟರ್ ಮತ್ತು ಅದರ ಉದ್ದೇಶದ ವ್ಯಾಖ್ಯಾನ.
ಮೌಲ್ಯಗಳು ಮತ್ತು ತತ್ವಗಳು ಇಡೀ ಮೂವ್ ಮೆಂಟ್ ನ ಮೂಲ ಮೌಲ್ಯಗಳು ಮತ್ತು ಸಹಯೋಗದ ತತ್ವಗಳು.
ವ್ಯಾಖ್ಯಾನಗಳು ಚಾರ್ಟರ್ನಲ್ಲಿ ವಿವರಿಸಿರುವ ಪ್ರಮುಖ ಪರಿಕಲ್ಪನೆಗಳ ವ್ಯಾಖ್ಯಾನ.
ಜಾಗತಿಕ ಮಂಡಳಿ ಗ್ಲೋಬಲ್ ಕೌನ್ಸಿಲ್ ಭವಿಷ್ಯದ ಪ್ರಮುಖ ಜಾಗತಿಕ ಚಳುವಳಿ ಆಡಳಿತ ಮಂಡಳಿಯ ವ್ಯಾಖ್ಯಾನ. ಈ ವಿಭಾಗವು ಜಾಗತಿಕ ಮಂಡಳಿಯ ಮೂವ್‌ಮೆಂಟ್ ಸ್ಟ್ರಾಟಜಿ ಶಿಫಾರಸುಗಳಲ್ಲಿ ಪಾತ್ರದ ವಿವರಣೆಯನ್ನು ವಿಸ್ತರಿಸುತ್ತದೆ. ಇದು ಜಾಗತಿಕ ಮಂಡಳಿಯನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಸಹ ವಿವರಿಸಬಹುದು
ಹಬ್ಸ್ ವಿಕಿಮೀಡಿಯಾ ಹಬ್‌ಗಳ ವ್ಯಾಖ್ಯಾನ, ಉದ್ದೇಶ, ಸ್ಥಾಪನೆ ಪ್ರಕ್ರಿಯೆ, ಆಡಳಿತದ ಮಾನದಂಡಗಳು, ಸದಸ್ಯತ್ವ ಸಂಯೋಜನೆ, ಜವಾಬ್ದಾರಿಗಳು, ಸುರಕ್ಷತೆಗಳು ಮತ್ತು ಇತರ ಮೂವ್ ಮೆಂಟ್ ಸಂಸ್ಥೆಗಳಿಗೆ ಮತ‍್ತು ವಿಕಿಮೀಡಿಯಾ ಹಬ್ ನ ಸಂಬಂಧ.
ಪಾತ್ರಗಳು ಮತ್ತು ಜವಾಬ್ದಾರಿಗಳು ಮೂವ್ ಮೆಂಟ್ ಘಟಕಗಳ ಪಾತ್ರಗಳು ಮತ್ತು ಜವಾಬ್ದಾರಿಗಳ ವ್ಯಾಖ್ಯಾನ. ಇದು ಇತರರೊ೦ದಿಗೆ ಟ್ರಸ್ಟಿಗಳ ಮಂಡಳಿ, ವಿಕಿಮೀಡಿಯಾ ಫೌಂಡೇಶನ್, ವಿಕಿಮೀಡಿಯಾ ಅಂಗಸಂಸ್ಥೆಗಳು ಮತ್ತು ಸಮುದಾಯಗಳು ಮುಂತಾದ ಘಟಕಗಳ ಪಾತ್ರಗಳ ವ್ಯಾಖ್ಯಾನಗಳನ್ನು ಒಳಗೊಂಡಿರುತ್ತದೆ
ತಿದ್ದುಪಡಿಗಳು ಮತ್ತು ಅನುಷ್ಠಾನ ಚಾರ್ಟರ್ನ ತಿದ್ದುಪಡಿ ಮತ್ತು ಅನುಷ್ಠಾನ ಪ್ರಕ್ರಿಯೆಗಳ ವ್ಯಾಖ್ಯಾನ. ಚಾರ್ಟರ್ ಮೂವ್ ಮೆಂಟ್ ಅನುಮೋದನೆ ನೀಡಿದ ನಂತರ ಬದಲಾವಣೆಗಳನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ಇದು ವಿವರಿಸುತ್ತದೆ. ವಿಕಿಮೀಡಿಯಾ ಮೂವ್ ಮೆಂಟ್ ಗೆ ಚಾರ್ಟರ್ ಮೂವ್ ಮೆಂಟ್ ನಲ್ಲಿ ಕಲ್ಪಿಸಲಾದ ಬದಲಾವಣೆಗಳನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಮತ್ತು ಆಚರಣೆಯಲ್ಲಿ ಹೇಗೆ ಜಾರಿಗೊಳಿಸಲಾಗುತ್ತದೆ ಎಂಬುದನ್ನು ಸಹ ಇದು ವಿವರಿಸುತ್ತದೆ.
ಪದಕೋಶ ಚಾರ್ಟರ್ ಮೂವ್ ಮೆಂಟ್ ನ ಪ್ರತಿಯೊಂದು ಅಧ್ಯಾಯದಲ್ಲಿ ಬಳಸಲಾದ ಪ್ರಮುಖ ಪದಗಳ ವಿವರವಾದ ರೂಪರೇಖೆ ಮತ್ತು ವ್ಯಾಖ್ಯಾನಗಳು.