ಅನುದಾನ: ಪ್ರಾರಂಭ
ವಿಕಿಮೀಡಿಯಾ ಫೌಂಡೇಶನ್ ಉಚಿತ ಜ್ಞಾನದ ವೈವಿಧ್ಯತೆ, ತಲುಪುವಿಕೆ, ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸಲು ಪ್ರಪಂಚದಾದ್ಯಂತದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಬೆಂಬಲಿಸುತ್ತದೆ. ವಿಕಿಮೀಡಿಯಾ ಚಳುವಳಿಯ ಕಾರ್ಯತಂತ್ರದ ನಿರ್ದೇಶನದೊಂದಿಗೆ ನಾವು ಜ್ಞಾನದ ಸಮಾನತೆಯನ್ನು ಉತ್ತೇಜಿಸುತ್ತೇವೆ. ನಮ್ಮ ಧನಸಹಾಯ ಕಾರ್ಯಕ್ರಮಗಳು ವಿಕೇಂದ್ರೀಕೃತ ನಿರ್ಧಾರ-ಮಾಡುವಿಕೆ, ಪ್ರಾದೇಶಿಕ ಸಮಿತಿಗಳು ಮತ್ತು ಕಡಿಮೆ ಪ್ರತಿನಿಧಿಸುವ ಸಮುದಾಯಗಳನ್ನು ತಲುಪುವುದರ ಮೇಲೆ ಕೇಂದ್ರೀಕೃತವಾಗಿವೆ.
ನಮ್ಮ ಜನ-ಕೇಂದ್ರಿತ ವಿಧಾನವನ್ನು ಇಕ್ವಿಟಿ ಮತ್ತು ಸಬಲೀಕರಣ, ಸಹಯೋಗ ಮತ್ತು ಸಹಕಾರ, ಮತ್ತು ನಾವೀನ್ಯತೆ ಮತ್ತು ಕಲಿಕೆಯ ಪ್ರಚಾರದ ತತ್ವಗಳ ಮೇಲೆ ನಿರ್ಮಿಸಲಾಗಿದೆ. ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಬೆಂಬಲಿಸುವ ನಾಲ್ಕು ಹಣಕಾಸು ಕಾರ್ಯಕ್ರಮಗಳನ್ನು ನಾವು ಹೊಂದಿದ್ದೇವೆ: ವಿಕಿಮೀಡಿಯಾ ಸಮುದಾಯ ನಿಧಿ, ವಿಕಿಮೀಡಿಯಾ ಅಲೈಯನ್ಸ್ ನಿಧಿ, ವಿಕಿಮೀಡಿಯ ಸಂಶೋಧನೆ ಮತ್ತು ತಂತ್ರಜ್ಞಾನ ನಿಧಿ, ಮತ್ತು ಚಳುವಳಿ ಕಾರ್ಯತಂತ್ರ ಅನುಷ್ಠಾನ ಅನುದಾನಗಳು.
ಅನುದಾನಿತ ಕಾರ್ಯಕ್ರಮಗಳು
ವಿಕಿಮೀಡಿಯಾ ಫೌಂಡೇಶನ್ ಫಂಡ್‌ಗಳನ್ನು ಸಮುದಾಯ ಸಂಪನ್ಮೂಲಗಳ ತಂಡ ಬೆಂಬಲಿಸುತ್ತದೆ. ನಮ್ಮ ತಂಡವು ಸ್ಥಿರವಾದ ಪ್ರಾದೇಶಿಕ ಬೆಂಬಲ ಒದಗಿಸುತ್ತದೆ ಮತ್ತು ಕಲಿಕಾ ಮನಸ್ಥಿತಿ ಸ್ಥಾಪನೆಗೆ ಕೊಡುಗೆ ನೀಡುತ್ತದೆ.
ಇತರ ಧನಸಹಾಯ ಕಾರ್ಯಕ್ರಮಗಳು
ನವೀಕರಣಗಳು
ಆಗಸ್ಟ್ ೧, ೨೦೨೪: The Regional Budgets and Changes to the General Support Funds are published for fiscal year 2024–25. |
ಇದು ಸಹ ನೋಡಿ
- ವಿಕಿಮೀಡಿಯಾ ಮೂಮೆಂಟಾದ್ಯಂತ ಧನಸಹಾಯದ ಅವಕಾಶಗಳು (ಹಳೆಯ ಮಾಹಿತಿಯನ್ನು ಹೊಂದಿರಬಹುದು)