ವಿಕಿಮೀಡಿಯಾ ಫೌಂಡೇಶನ್ ಬೋರ್ಡ್‌ ಆಫ್ ಟ್ರಸ್ಟೀಸ್‌

This page is a translated version of the page Wikimedia Foundation Board of Trustees/Overview and the translation is 94% complete.
Outdated translations are marked like this.

ವಿಕಿಮೀಡಿಯಾ ಫೌಂಡೇಶನ್‌ನ
ಬೋರ್ಡ್‌ ಆಫ್ ಟ್ರಸ್ಟೀಸ್‌


ನಿಮಗೆ ಗೊತ್ತಾ? ನೀವು ವಿಕಿಪೀಡಿಯಾದಲ್ಲಿ ನಿಮ್ಮ ನೆಚ್ಚಿನ ಬರಹವೊಂದನ್ನು ಓದುತ್ತಿರುವ ಹೊತ್ತಿನಲ್ಲೇ, ಸಾವಿರಾರು ಜನರು ಗಾಳಿಯಷ್ಟೇ ಉಚಿತವಾದ ಜ್ಞಾನವನ್ನು ಉಚಿತವಾಗಿ ಹಂಚಲು ಶ್ರಮಿಸುತ್ತಾರೆ.

ವಿಕಿಪೀಡಿಯಾ, ವಿಕಿಡೇಟಾ, ವಿಕಿಸೋರ್ಸ್‌, ಇನ್ನೂ ಮುಂತಾದ ಅದ್ಭುತ ತಾಣಗಳನ್ನು ಮುನ್ನಡೆಸಲು ಜಾಗತಿಕ ಮಟ್ಟದ ಜಾಣರ ಕೂಟವೊಂದಿದೆ.

ವಿಕಿಮೀಡಿಯಾ ಫೌಂಡೇಶನ್, ಈ ಕೂಟದ ಕೆಲಸಗಳಿಗೆ ನೆರವು ನೀಡುತ್ತದೆ. ಅದು ತಾಂತ್ರಿಕ ಸಂಪನ್ಮೂಲಗಳು, ಕಾನೂನಾತ್ಮಕ ಸವಾಲುಗಳು ಮತ್ತು ಹೊಸಹೊಸ ಅಡೆತಡೆಗಳನ್ನು ನಿರ್ವಹಿಸುತ್ತದೆ.

ವಿಕಿಮೀಡಿಯಾ ಫೌಂಡೇಶನ್‌ನ ಬೋರ್ಡ್‌ ಆಫ್ ಟ್ರಸ್ಟೀಸ್‌, ಸಂಸ್ಥೆಯ ಎಲ್ಲಾ ಕೆಲಸಗಳ ಮೇಲ್ವಿಚಾರಣೆ ನಡೆಸುತ್ತದೆ. ಕೆಲವು ಟ್ರಸ್ಟಿಗಳನ್ನು ಸಮುದಾಯದಿಂದ ಆರಿಸಿದರೆ, ಉಳಿದವರು ಬೋರ್ಡ್‌ನಿಂದ ನೇರವಾಗಿ ಆಯ್ಕೆಯಾಗುತ್ತಾರೆ.

ಬೋರ್ಡ್‌ನಲ್ಲಿ ಒಟ್ಟು 16 ಸ್ಥಾನಗಳಿವೆ:
ಸಮುದಾಯ ಮತ್ತು ಅಫಿಲಿಯೇಟ್ ಸ್ಥಾನಗಳು - 8,
ಬೋರ್ಡ್‌ನಿಂದ ಆಯ್ಕೆಯಾಗುವ ಸ್ಥಾನಗಳು - 7,
ಸಂಸ್ಥಾಪಕರ ಸ್ಥಾನ - 1.

ಪ್ರತಿಯೊಬ್ಬ ಟ್ರಸ್ಟಿ 3 ವರ್ಷ ಸೇವೆ ಸಲ್ಲಿಸುತ್ತಾರೆ.


ಬೋರ್ಡ್‌ನಿಂದ ಆಯ್ಕೆಯಾಗುವ ಟ್ರಸ್ಟಿಗಳನ್ನು ವಿಶ್ವದ ಮೂಲೆಮೂಲೆಯಿಂದ ಆರಿಸಲಾಗುತ್ತದೆ. ಬೋರ್ಡ್‌ ಆಫ್ ಟ್ರಸ್ಟೀಸ್ ಮತ್ತು ಅಭ್ಯರ್ಥಿಗಳಿಗೆ ಈ ಸ್ಥಾನ ಸೂಕ್ತವೆನಿಸಿದಾಗ ಅವರು ಬೋರ್ಡ್‌ನ ಭಾಗವಾಗುತ್ತಾರೆ.

ವಿಕಿಮೀಡಿಯಾ ಸಮುದಾಯಕ್ಕೆ, ತಮ್ಮ ನಡುವಿನಿಂದ ಆಯ್ಕೆಯಾಗುವ ಸದಸ್ಯರನ್ನು ಚುನಾಯಿಸುವ ಅವಕಾಶ ನೀಡಲಾಗುತ್ತದೆ. ಇದು ಬೋರ್ಡ್‌ನ ಪ್ರಾತಿನಿಧ್ಯ, ವೈವಿಧ್ಯತೆ ಮತ್ತು ಪರಿಣತಿಯನ್ನು ಇನ್ನಷ್ಟು ಸುಧಾರಿಸುವ ಅವಕಾಶವೂ ಹೌದು.


ಟ್ರಸ್ಟಿಗಳು ವರ್ಷದ 150 ಗಂಟೆಗಳನ್ನು ತಮ್ಮ ಕೆಲಸಕ್ಕಾಗಿ ಮೀಸಲಿಡುತ್ತಾರೆ. ಅವರು ಕನಿಷ್ಟ ಒಂದಾದರೂ ಬೋರ್ಡ್‌ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಆಡಳಿತ, ಆಡಿಟ್, ಮಾನವ ಸಂಪನ್ಮೂಲ, ಉತ್ಪನ್ನ, ವಿಶೇಷ ಯೋಜನೆಗಳು ಮತ್ತು ಸಮುದಾಯ ವ್ಯವಹಾರಕ್ಕೆ ಸಂಬಂಧಿಸಿದ ಸಮಿತಿಗಳು ಇದರಲ್ಲಿ ಸೇರಿವೆ.
ಸಭೆಯ ನಡಾವಳಿಯು ಸಾರ್ವಜನಿಕವಾಗಿ ಲಭ್ಯವಿದ್ದರೆ, ಅದನ್ನು 'ಫೌಂಡೇಶನ್ ವಿಕಿ'ಯ ಮೀಟಿಂಗ್ಸ್‌ ಪೇಜ್‌ ಅಥವಾ ಆಯಾ ಸಮಿತಿಗಳ ಪುಟದಲ್ಲಿ ಹಂಚಿಕೊಳ್ಳಲಾಗುತ್ತದೆ.
ಈ ಪೇಜ್‌ನಲ್ಲಿ, ಬೋರ್ಡ್‌ ಆಫ್ ಟ್ರಸ್ಟೀಸ್ ಕುರಿತು ಇನ್ನಷ್ಟು ಮಾಹಿತಿ ಪಡೆಯಿರಿ ಮತ್ತು ನೀವೂ ಈ ಬೋರ್ಡಿಗೆ ಸೇರುವುದು ಹೇಗೆಂದು ತಿಳಿಯಿರಿ.