VisualEditor/Newsletter/2020/July/kn
ಸುದ್ದಿ ಸಂಪಾದನೆ ೨೦೨೦ #೩
Read this in another language • Subscription list for this multilingual newsletter
ಏಳು ವರ್ಷಗಳ ಹಿಂದೆ ಈ ತಿಂಗಳು, ಸಂಪಾದನೆ ತಂಡ ಹೆಚ್ಚಿನ ವಿಕಿಪೀಡಿಯ ಸಂಪಾದಕರಿಗೆ ದೃಶ್ಯ ಸಂಪಾದಕವನ್ನು ನೀಡಿತ್ತು. ಅಂದಿನಿಂದ, ಸಂಪಾದಕರು ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ:
- 50 ದಶಲಕ್ಷಕ್ಕೂ ಹೆಚ್ಚಿನ ಸಂಪಾದನೆಗಳು ಡೆಸ್ಕ್‌ಟಾಪ್‌ನಲ್ಲಿನ ದೃಶ್ಯ ಸಂಪಾದಕವನ್ನು ಬಳಸಿ ಮಾಡಲಾಗಿದೆ.
- ದೃಶ್ಯ ಸಂಪಾದಕದಲ್ಲಿ 2 ಮಿಲಿಯನ್ ಹೊಸ ಲೇಖನಗಳನ್ನು ರಚಿಸಲಾಗಿದೆ. ಈ ಹೊಸ ಲೇಖನಗಳಲ್ಲಿ ೬೦೦,೦೦೦ಕ್ಕೂ ಹೆಚ್ಚು ಲೇಖನಗಳನ್ನು ೨೦೧೯ ರಲ್ಲಿ ರಚಿಸಲಾಗಿದೆ.
- ದೃಶ್ಯ ಸಂಪಾದಕ ಹೆಚ್ಚು ಜನಪ್ರಿಯವಾಗಿದೆ . ದೃಶ್ಯ ಸಂಪಾದಕವನ್ನು ಬಳಸಿಕೊಂಡು ಮಾಡಿದ ಎಲ್ಲಾ ಸಂಪಾದನೆಗಳ ಪ್ರಮಾಣವು ಅದರ ಪರಿಚಯದ ನಂತರ ಪ್ರತಿವರ್ಷ ಹೆಚ್ಚಾಗಿದೆ.
- ೨೦೧೯ ರಲ್ಲಿ, ಹೊಸಬರಿಂದ ೩೫% ಸಂಪಾದನೆಗಳು (≤೯೯ ಸಂಪಾದನೆಗಳೊಂದಿಗೆ ಲಾಗ್-ಇನ್ ಸಂಪಾದಕರು) ದೃಶ್ಯ ಸಂಪಾದಕವನ್ನು ಬಳಸಿದ್ದಾರೆ. ಈ ಶೇಕಡಾವಾರು ಪ್ರತಿವರ್ಷ ಹೆಚ್ಚಾಗಿದೆ .
- ಮೊಬೈಲ್ ಸೈಟ್‌ನಲ್ಲಿ ಸುಮಾರು ೫ ಮಿಲಿಯನ್ ಸಂಪಾದನೆಗಳು ದೃಶ್ಯ ಸಂಪಾದಕದೊಂದಿಗೆ ಮಾಡಲಾಗಿದೆ. ಎಡಿಟಿಂಗ್ ತಂಡವು ೨೦೧೮ ರಲ್ಲಿ mobile visual editor ಅನ್ನು ಸುಧಾರಿಸಲು ಪ್ರಾರಂಭಿಸಿದಾಗಿನಿಂದ ಈ ಹೆಚ್ಚಿನ ಸಂಪಾದನೆಗಳನ್ನು ಮಾಡಲಾಗಿದೆ.
- ೧೭ ನವೆಂಬರ್ ೨೦೧೯ ರಂದು, ಮೊಬೈಲ್ ದೃಶ್ಯ ಸಂಪಾದಕದಲ್ಲಿ ಬಾಹ್ಯಾಕಾಶದಿಂದ ಮೊದಲ ಸಂಪಾದನೆ ಮಾಡಲಾಗಿದೆ. 🚀 👩🚀
- ಸಂಪಾದಕರು ೨೦೧೭ ರ ವಿಕಿಟೆಕ್ಸ್ಟ್ ಎಡಿಟರ್ ನಲ್ಲಿ ೭ ಮಿಲಿಯನ್ ಸಂಪಾದನೆಗಳನ್ನು ಮಾಡಿದ್ದಾರೆ, ಅದರಲ್ಲಿ ೬೦೦,೦೦೦ ಹೊಸ ಲೇಖನಗಳನ್ನು ಪ್ರಾರಂಭಿಸುವುದು ಸೇರಿದಂತೆ. 2017 wikitext editor ವಿಷುಯಲ್ ಎಡಿಟರ್ನ ಅಂತರ್ನಿರ್ಮಿತ ವಿಕಿಟೆಕ್ಸ್ಟ್ ಮೋಡ್ ಆಗಿದೆ. ನೀವು enable it in your preferences.