ಸ್ಥಾಪನಾ ತತ್ವಗಳು

This page is a translated version of the page Founding principles and the translation is 100% complete.

Wikimedia ಯೋಜನೆಗಳು ಸಾಮಾನ್ಯವಾಗಿ ಕೆಲವು 'ಸ್ಥಾಪಕ ತತ್ವಗಳನ್ನು ಹೊಂದಿವೆ. ಈ ತತ್ವಗಳು ಕಾಲಾನಂತರದಲ್ಲಿ ವಿಕಸನಗೊಳ್ಳಬಹುದು ಅಥವಾ ಪರಿಷ್ಕರಿಸಬಹುದು, ಆದರೆ ಅವುಗಳನ್ನು ವಿಕಿಮೀಡಿಯಾ ಯೋಜನೆಗಳ ಸ್ಥಾಪನೆಗೆ ಅತ್ಯಗತ್ಯ ಆದರ್ಶಗಳು ಎಂದು ಪರಿಗಣಿಸಲಾಗುತ್ತದೆ – ವಿಕಿಮೀಡಿಯಾ ಫೌಂಡೇಶನ್ (ಇದು ವಿಕಿಮೀಡಿಯಾ ಯೋಜನೆಗಳಿಂದಲೂ ಹುಟ್ಟಿಕೊಂಡಿದೆ) ನೊಂದಿಗೆ ಗೊಂದಲಕ್ಕೀಡಾಗಬಾರದು. ಅವರೊಂದಿಗೆ ಬಲವಾಗಿ ಒಪ್ಪದ ಜನರು ಸೈಟ್‌ನಲ್ಲಿ ಸಹಯೋಗ ಮಾಡುವಾಗ ಅವರನ್ನು ಗೌರವಿಸುತ್ತಾರೆ ಅಥವಾ ಇನ್ನೊಂದು ಸೈಟ್‌ಗೆ ತಿರುಗುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಸಾಧ್ಯವಾಗದವರು ಅಥವಾ ಇಷ್ಟವಿಲ್ಲದವರು ಕೆಲವೊಮ್ಮೆ ಯೋಜನೆಯನ್ನು ತೊರೆಯುತ್ತಾರೆ.

ಈ ತತ್ವಗಳು ಈ ಕೆಳಗಿನವನ್ನು ಒಳಗೊಂಡಿವೆ:

  1. ತಟಸ್ಥ ದೃಷ್ಟಿಕೋನ - ಒಂದು ಮಾರ್ಗದರ್ಶಕ ಸಂಪಾದನಾ ತತ್ವವಾಗಿ.
  2. ನೋಂದಾವಣೆ ಇಲ್ಲದೇ ಯಾರು ಬೇಕಾದರೂ (ಬಹುತೇಕ) ಲೇಖನಗಳನ್ನು ಸಂಪಾದನೆ ಮಾಡಲು ಸಾಧ್ಯವಾಗಿಸುವಿಕೆ.
  3. ಎಲ್ಲಾ ಮಾಹಿತಿಗಳಿಗೂ (content) "ವಿಕಿ ಪ್ರಕ್ರಿಯೆ"ಯ ಮೂಲಕವೇ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುವ ವ್ಯವಸ್ಥೆ.
  4. ಹಿತವಾದ ಮತ್ತು ಕಲಿತುಕೊಳ್ಳುವಂತೆ ಮಾಡುವ ಸಂಪಾದನಾ ವಾತಾವರಣದ ನಿರ್ಮಾಣ.
  5. ಮಾಹಿತಿಯ ಮುಕ್ತ ಪರವಾನಗಿ; ಪ್ರತಿ ಯೋಜನೆಗಳಲ್ಲೂ ಆಚರಣೆಯಲ್ಲಿರುವಂತೆ public domain, GFDL, CC BY-SA or CC BY ರೀತಿಗಳಲ್ಲಿ ವಿವರಿಸಲ್ಪಟ್ಟಿರುತ್ತವೆ.
  6. ನಿರ್ದಿಷ್ಟವಾದ ಕ್ಲಿಷ್ಟಕರ ಸಮಸ್ಯೆಗಳ ಬಗೆಹರಿಸುವಿಕೆಗೆ ನೆರವಾಗಲು fiat ಪ್ರಕ್ರಿಯೆಗೆ ಅವಕಾಶ. ಒಂದು ಡಜನ್ ಯೋಜನೆಗಳಲ್ಲಿ, ಒಂದು Arbitration Committeeಗೆ ಕೆಲವು ನಿಬಂಧನೆಗಳನ್ನು ಮಾಡಲು ಮತ್ತು ಸಂಪಾದಕರನ್ನು ನಿಷೇಧ ಮಾಡುವಂತಹ ಅಂತಿಮ ತೀರ್ಮಾನಗಲನ್ನು ಕೈಗೊಳ್ಳುವ ಅಧಿಕಾರ.

ಹೊರತುಪಡಿಕೆಗಳು

ಎಲ್ಲಾ ಯೋಜನೆಗಳು ಈ ಎಲ್ಲಾ ತತ್ವಗಳಿಗೆ ಬದ್ಧವಾಗಿರುವುದಿಲ್ಲ.

  • ಕೆಲವು ಯೋಜನೆಗಳು ತಟಸ್ಥ ದೃಷ್ಟಿಕೋನಕ್ಕೆ ಬದ್ಧವಾಗಿರುವುದಿಲ್ಲ. (Commons ಹೇಳುವ ಪ್ರಕಾರ, ಕಾಮನ್ಸ್ ಎನ್ನುವುದು ವಿಕಿಪೀಡಿಯ ಅಲ್ಲ, ಅದರಲ್ಲಿ ಅಪ್ಲೋಡ್ ಆಗುವ ಫೈಲ್‍ಗಳು ತಟಸ್ಥ ದೃಷ್ಟಿಕೋನವನ್ನು ಅನುಸರಿಸಬೇಕಂತಿಲ್ಲ) ಅಥವಾ 'ಸದ್ಬಳಕೆ'ಯಂತಹ ಸರಳ ನೀತಿಯನ್ನು ಹೊಂದಿರಬಹುದು. (Wikivoyage ಹೇಳುವ ಪ್ರಕಾರ "ಪ್ರಯಾಣ ಮಾರ್ಗದರ್ಶನ"ವನ್ನು ತಟಸ್ಥ ದೃಷ್ಟಿಕೋನದಿಂದ 'ಬರೆಯುವಂತಿಲ್ಲ').
  • ಕೆಲವು ಯೋಜನೆಗಳು ಕಾರ್ಯನಿರ್ವಹಣೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಮೂಲಭೂತವಾಗಿ ವಿಕಿ ಸಹಯೋಗದಲ್ಲಿಲ್ಲ (ಮೀಡಿಯಾವಿಕಿ)
  • ಕೆಲವು ಯೋಜನೆಗಳು ಸದ್ಬಳಕೆಗಾಗಿ ಅಥವಾ ಇನ್ನಿತರ ಮುಕ್ತಪರವಾನಗಿ ಹೊಂದಿಲ್ಲದ ಮೀಡಿಯಾಗಳಿಗೆ ಅನುಮತಿಯ ನೀತಿಯನ್ನು ಹೊಂದಿರುತ್ತವೆ. (ಆಯಾ ನಿರ್ದಿಷ್ಟ ಭಾಷೆಗಳ ವಿಕಿಪೀಡಿಯಗಳು)

ಇವನ್ನೂ ನೋಡಿ