ವಿಕಿಮೀಡಿಯಾ ಫೌಂಡೇಶನ್ ಸಮುದಾಯ ವ್ಯವಹಾರಗಳ ಸಮಿತಿ/ಸೋದರ ಯೋಜನೆಯ ಜೀವನಚಕ್ರದ ಕಾರ್ಯವಿಧಾನ/ಪ್ರತಿಕ್ರಿಯೆಗಾಗಿ ಆಹ್ವಾನ (MM)

ಸೋದರ ಯೋಜನೆಯ ಕಾರ್ಯವಿಧಾನದ ಬಗ್ಗೆ ಪ್ರತಿಕ್ರಿಯೆ ಆಹ್ವಾನಿಸಲಾಗಿದೆ

ಈ ಸಂದೇಶವನ್ನು ಮೆಟಾ-ವಿಕಿಯಲ್ಲಿ ಹೆಚ್ಚುವರಿ ಭಾಷೆಗಳಿಗೆ ಅನುವಾದಿಸಿರುವುದನ್ನು ನೀವು ಕಾಣಬಹುದು. Please help translate to your language
 

ಪ್ರಿಯ ಸಮುದಾಯ ಸದಸ್ಯರೇ,

ವಿಕಿಪೀಡಿಯ ಫ಼ೌಂಡೇಶನ್ನಿನ ಸಮುದಾಯ ವ್ಯವಹಾರಗಳ ಸಮಿತಿಯು ವಿಕಿಮೀಡಿಯಾ ಸೋದರ ಯೋಜನೆಗಳ ಪ್ರಾರಂಭ ಮತ್ತು ಮುಕ್ತಾಯಗೊಳಿಸಲು ಅನುಸರಿಸಬೇಕಾದ ನಿಯಮಾವಳಿಗಳನ್ನು ರೂಪಿಸಿದ್ದು, ಇದರ ಬಗ್ಗೆ ತಮ್ಮ ಅಬಿಪ್ರಾಯಗಳನ್ನು ಅಹ್ವಾನಿಸಿದ್ದಾರೆ. ಈ ಕರಡು ನಿಯಮಾವಳಿಗಳು ಯೋಜನೆಗಳ ಪ್ರಾರಂಭ ಮತ್ತು ಮುಕ್ತಾಯಗೊಳಿಸಲು ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ವಿವರಿಸುತ್ತವೆ. ಇದರ ಉದ್ದೇಶ ಹೊಸದಾಗಿ ಪ್ರಾರಂಭಿಸುವ ಯೋಜನೆಗಳು ಯಶಸ್ವಿಯಾಗುವುದನ್ನು ಖಾತ್ರಿಪಡಿಸುವುದೇ ಆಗಿದೆ. ಇದು ಭಾಷಾ ಸಮಿಯು ನಿರ್ವಹಿಸುವ ವಿವಿಧ ಭಾಷಾ ಯೋಜನೆಗಳ ಪ್ರಾರಂಭ ಮತ್ತು ಮುಕ್ತಾಯ ನಿಯಮಗಳಿಗಿಂತ ವಿಭಿನ್ನವಾಗಿದೆ.

ನೀವು ಹೆಚ್ಚಿನ ವಿವರಗಳನ್ನು ಈ ಪುಟದಲ್ಲಿ ಪಡೆಯಬಹುದು.ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಈ ದಿನದಿಂದ ಜೂನ್ ೨೩,೨೦೨೪ರ ಮುಕ್ತಾಯದ ವರೆಗೆ ಪ್ರಪಂಚದ ಎಲ್ಲಿಂದಾದರೂ ಕಳುಹಿಸಬಹುದು.

ನೀವು ಈ ಬಗ್ಗೆ ಮಾಹಿತಿಗಳನ್ನು ನೀವು ಕೆಲಸ ಮಾಡುವ ಅಥವಾ ಬೆಂಬಲ ನೀಡುವ ಆಸಕ್ತ ಯೋಜನಾ ಸಮಿತಿಗಳಲ್ಲಿ ಹಂಚಿಕೊಳ್ಳಬಹುದು ಮತ್ತು ಈ ಮಾಹಿತಿಯನ್ನು ಹೆಚ್ಚಿನ ಭಾಷೆಗಳಿಗೆ ಅನುವಾದಿಸುವುದರಿಂದ ಅವರೂ ಕೂಡ ಈ ಚರ್ಚೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬಹುದು.

CAC ಯ ಪರವಾಗಿ,