ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೧೨ (ಸೋಮವಾರ ೨೦ ಮಾರ್ಚ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-12
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಸಮಸ್ಯೆಗಳು
- ಕಳೆದ ವಾರ, ಕೆಲವು ಬಳಕೆದಾರರು ಚಿತ್ರ ಥಂಬ್ನೇಲ್ಗಳನ್ನು ಲೋಡ್ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ತಪ್ಪಾಗಿ ಸಂಗ್ರಹವಾಗಿರುವ ಚಿತ್ರಗಳ ಸಂಗ್ರಹದಿಂದ ಇದು ಸಂಭವಿಸಿದೆ. [೧]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೨೧ ಮಾರ್ಚ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೨ ಮಾರ್ಚ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೩ ಮಾರ್ಚ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಬಳಕೆದಾರರ Special:CentralAuth ಪುಟಕ್ಕೆ ಲಿಂಕ್ Special:Contributions ನಲ್ಲಿ ಗೋಚರಿಸುತ್ತದೆ - ಈ ಲಿಂಕ್ ಅನ್ನು ಹಿಂದೆ ಸೇರಿಸಿದ ಕೆಲವು ಬಳಕೆದಾರ ಸ್ಕ್ರಿಪ್ಟ್ಗಳಿಂದ ಸಂಘರ್ಷಗಳನ್ನು ಉಂಟುಮಾಡಬಹುದು. ಈ ವೈಶಿಷ್ಟ್ಯದ ವಿನಂತಿಯು ೨೦೨೩ರ ಸಮುದಾಯ ಬಯಕೆಪಟ್ಟಿ ಸಮೀಕ್ಷೆಯಲ್ಲಿ #೧೭ನೇ ಶ್ರೇಣಿ ಯಲ್ಲಿದೆ.
- Special:AbuseFilter ಸಂಪಾದನೆ ಪರದೆ ಮರುಗಾತ್ರಗೊಳಿಸಬಹುದು ಮತ್ತು ಪೂರ್ವನಿಯೋಜಿತವಾಗಿ ದೊಡ್ಡದಾಗಿರುತ್ತದೆ. ಈ ವೈಶಿಷ್ಟ್ಯದ ವಿನಂತಿಯು ೨೦೨೩ರ ಸಮುದಾಯ ಬಯಕೆಪಟ್ಟಿ ಸಮೀಕ್ಷೆಯಲ್ಲಿ #೮೦ನೆ ಶ್ರೇಣಿಯಲ್ಲಿದೆ.
- ನಿರ್ವಾಹಕರು ಬಳಕೆದಾರರನ್ನು ಅನ್ಬ್ಲಾಕ್ ಮಾಡುವಾಗ, ಅನಿರ್ಬಂಧಿಸಲಾದ ಬಳಕೆದಾರರ ಬಳಕೆದಾರರ ಪುಟವನ್ನು ಅವರ ವೀಕ್ಷಣೆ ಪಟ್ಟಿಗೆ ಸೇರಿಸಲು ಹೊಸ ಆಯ್ಕೆ ಇರುತ್ತದೆ. ಇದು Special:Unblock ಮತ್ತು API ಮೂಲಕ ಕೆಲಸ ಮಾಡುತ್ತದೆ. [೨]
ಸಭೆಗಳು
- ನೀವು ವಿಕಿಪೀಡಿಯ ಮೊಬೈಲ್ ಅಪ್ಲಿಕೇಶನ್ಗಳ ತಂಡಗಳೊಂದಿಗೆ ಮುಂದಿನ ಸಭೆಗೆ ಸೇರಬಹುದು. ಈ ಸಭೆಯಲ್ಲಿ ಪ್ರಸ್ತುತ ವೈಶಿಷ್ಟ್ಯಗಳು ಮತ್ತು ಭವಿಷ್ಯದ ಮಾರ್ಗಸೂಚಿಯನ್ನು ಚರ್ಚಿಸಲಾಗುತ್ತದೆ. ಸಭೆಯು ೨೪ ಮಾರ್ಚ್ ೧೭:೦೦ (UTC) ರಂದು ನಡೆಯಲಿದೆ. ವಿವರಗಳು ಮತ್ತು ಹೇಗೆ ಸೇರುವುದು ಎಂದು ಈ ಪುಟದಲ್ಲಿ ನೋಡಿ.
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.