ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ನೀಡಿ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೪೬ (ಸೋಮವಾರ ೧೩ ನವೆಂಬರ್ ೨೦೧೭) | ಮುಂದಿನ |
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಈ ವಾರದ ಮುಂದಿನ ಬದಲಾವಣೆಗಳು
- ನೀವು ಪುಟದ ಎರಡು ವಿಭಿನ್ನ ಆವೃತ್ತಿಗಳನ್ನು ಹೋಲಿಸಿದಾಗ ನೀವು ಕಾಣುವ ವ್ಯತ್ಯಾಸವು MediaWiki.org ಮತ್ತು ಪರೀಕ್ಷಾ ವಿಕಿಯಲ್ಲಿ ಬದಲಾಗಿದೆ. ಚಲಿಸಿದ ಪ್ಯಾರಾಗ್ರಾಫ್ನಲ್ಲಿ ಪಠ್ಯ ಬದಲಾವಣೆ ಕಂಡುಕೊಳ್ಳುವುದು ಸುಲಭವಾಗುತ್ತದೆ. ಇದು ಶೀಘ್ರದಲ್ಲೇ ಹೆಚ್ಚಿನ ವಿಕಿಗಳಿಗೆ ಬರಲಿದೆ. ನೀವು ಫ್ಯಾಬ್ರಿಕೇಟರ್'ನಲ್ಲಿ ದೋಷಗಳನ್ನು ವರದಿ ಮಾಡಬಹುದು. [೧]
- ಕಾಮನ್ಸ್ನಲ್ಲಿ ಹೊಸ ಬಳಕೆದಾರ ಗುಂಪು MP3 ಫೈಲ್ಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುತ್ತದೆ. ಈ ಬಳಕೆದಾರ ಗುಂಪನ್ನು ನವೆಂಬರ್ 17 ರಿಂದ ಶುರುಮಾಡುವುದು ಯೋಜನೆ. [೨]
- ಫ್ಲ್ಯಾಗ್ ಮಾಡಲಾದ ಪರಿಷ್ಕರಣೆಗಳನ್ನು ಬಳಸುವ ವಿಕಿಗಳು ಇತ್ತೀಚಿನ ಬದಲಾವಣೆ ಪುಟಗಳಲ್ಲಿ ಪೂರ್ವನಿಯೋಜಿತವಾಗಿ ಪರಿಷ್ಕರಣೆಗಾಗಿ ಹೊಸ ಶೋಧಕಗಳು ಪಡೆಯುತ್ತವೆ. ಬಳಕೆದಾರರ ಆದ್ಯತೆಗಳಲ್ಲಿ ಆಯ್ಕೆಯಿಂದ ಹೊರಗುಳಿಯಲು ಸಾಧ್ಯವಿದೆ. [೩]
- ಮೀಡಿಯಾವಿಕಿ ಹೊಸ ಆವೃತ್ತಿ ೧೪ ನವೆಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೫ ನವೆಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೬ ನವೆಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಗೋಚರಿಸುತ್ತದ್ದೆ.
ಸಭೆಗಳು
- ನೀವು IRC ಯ ತಾಂತ್ರಿಕ ಸಲಹೆಯ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ಸಭೆಯು ೧೫ ನವೆಂಬರ್ ರಂದು 15:00 (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
ಭವಿಷ್ಯದ ಬದಲಾವಣೆಗಳು
- 3D ಮಾದರಿಗಳನ್ನು ಅಪ್ಲೋಡ್ ಮಾಡಲು ಮತ್ತು ವೀಕ್ಷಿಸಲು ಬೆಂಬಲ ಶೀಘ್ರದಲ್ಲೇ ವಿಕಿಮೀಡಿಯ ಕಾಮನ್ಸ್'ನಲ್ಲಿ ಬರಲಿದೆ. ಈ ವೈಶಿಷ್ಟ್ಯವು .STL ಫೈಲ್ ಸ್ವರೂಪವನ್ನು ಬೆಂಬಲಿಸುತ್ತದೆ. ಉದಾಹರಣೆಗಾಗಿ ಪರೀಕ್ಷಾ ವಿಕಿಗೆ ಬೇಟಿ ನೀಡಿ. [೪]
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ, ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ.