Research:Global South User Survey 2014/Questions/kn

This page is a translated version of the page Research:Global South User Survey 2014/Questions and the translation is 100% complete.

ಪ್ರವೇಶಪುಟ

೨೦೧೪ರ ದಕ್ಷಿಣ ಗೋಲಾರ್ಧದ ಬಳಕೆದಾರರ ಸರ್ವೇಕ್ಷಣದಲ್ಲಿ ಭಾಗವಹಿಸುತ್ತಿರುವದಕ್ಕೆ ನಿಮಗೆ ಧನ್ಯವಾದಗಳು
ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ : ಅದು ಸುಮಾರು ಹದಿನೈದು ನಿಮಿಷ ಸಮಯವನ್ನು ತೆಗೆದುಕೊಳ್ಳುತ್ತದೆ. ದಕ್ಷಿಣ ಗೋಲಾರ್ಧದ ದೇಶಗಳಲ್ಲಿನ ನಮ್ಮ ಬಳಕೆದಾರರ ಬಗೆಗೆ ಹೆಚ್ಚು ತಿಳಿದುಕೊಳ್ಳಲು ನಾವು ಇದಿರುನೋಡುತ್ತೇವೆ. ವಿಕಿಪೀಡಿಯ ಮತ್ತು ಇತರ ವಿಕಿಮೀಡಿಯ ಯೋಜನೆಗಳ ಕುರಿತಾದ ನಿಮ್ಮ ಪ್ರತಿಕ್ರಿಯೆಯು ನಮ್ಮ ಪಾಲಿಗೆ ಬಹಳ ಬೆಲೆಯುಳ್ಳದ್ದಾಗಿದೆ. ದಕ್ಷಿನ ಗೋಲಾರ್ಧದಲ್ಲಿನ ಸ್ಥಳೀಯ ಬಳಕೆದಾರ ಸಮೂಹಗಳ ವಿಶಿಷ್ಟ ಅಗತ್ಯಗಳನ್ನು ತಿಳಿಯಲು ಅದು ನಮಗೆ ನೆರವಾಗುವುದು, ಉತ್ಪನ್ನಗಳ ಅಭಿವೃದ್ಧಿಯನ್ನು ಬೆಂಬಲಿಸುವ ಮಾಹಿತಿಯನ್ನು ಅದು ನೀಡುವುದು ಮತ್ತು ಮುಂದೆ ಬರಲಿರುವ ವ್ಯೂಹಾತ್ಮಕ ಯೋಜನೆಯ ಪ್ರಕ್ರಿಯೆಗೆ ದಿಕ್ಕು ತೋರುವಲ್ಲಿ ಸಹಾಯಕವಾಗುವುದು. .
ಒಂದಿಷ್ಟು ಕಾನೂನು ಸಂಗತಿಗಳು ....
ಈ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ನಿಮ್ಮ ಪ್ರತಿಕ್ರಿಯೆಗಳು ದಾಖಲಿಸಲು ನಮಗೆ ಅನುಮತಿ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಅವುಗಳನ್ನು ಕೊಡಲು ಒಪ್ಪುತ್ತೀರಿ. ಮುಕ್ತ ವಿಶ್ಲೇಷಣೆ, ಸಂಶೋಧನೆ, ಮತ್ತು ಅಧ್ಯಯನದ ಉದ್ದೇಶಗಳಿಗಾಗಿ ಇತರರೊಂದಿಗೆ ನಿಮ್ಮ ಉತ್ತರಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇದು ನಮಗೆ ಅನುಮತಿಸುತ್ತದೆ. ಕಾನೂನಿನ ಅಗತ್ಯಗಳನ್ನು ಹೊರತುಪಡಿಸಿ ನಾವು ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಅಥವಾ ಇಮೇಲ್ ಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ. ( ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸ್ಪಷ್ಟವಾಗಿ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಮಾತ್ರ ನೀವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡುತ್ತೀರಿ ಎಂದು ನಾವು ಊಹಿಸುತ್ತೇವೆ.)
ನಿಮ್ಮ ಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದಗಳು!

ಜನಸಂಖ್ಯಾಶಾಸ್ತ್ರ

 • ನೀವು ಇರುವ ದೇಶ ಯಾವುದು?
  • ಅರ್ಜೆಂಟೈನಾ
  • ಬಾಂಗ್ಲಾದೇಶ
  • ಬ್ರೆಜಿಲ್
  • ಇಜಿಪ್ಟ್
  • ಭಾರತ
  • ಇಂಡೋನೇಶಿಯಾ
  • ಜೋರ್ಡಾನ್
  • ಮೆಕ್ಸಿಕೋ
  • ಫಿಲಿಪ್ಪೈನ್ಸ್
  • ಸೌದಿ ಅರೇಬಿಯಾ
  • ಟರ್ಕಿ
  • ವಿಯೆಟ್ನಾಂ
  • ಬೇರೆ (ದಯವಿಟ್ಟು ಸ್ಪಷ್ಟಪಡಿಸಿ)
 • ನಿಮ್ಮ ವಯಸ್ಸಿನ ಪರಿಧಿ ಏನು?
  • ೧೦-೧೫ (10–15)
  • ೧೬-೨೦(16–20)
  • ೨೧-೨೫(21–25)
  • ೨೬-೩೦(26–30)
  • ೩೧-೩೫ (31–35)
  • ೩೬-೪೦ (36–40)
  • ೪೧-೪೫ (41–45)
  • ೪೬-೫೦ (46–50)
  • ೫೧-೫೫ (51–55)
  • ೫೬-೬೦ (56–60)
  • ೬೧-೬೫ (61–65)
  • ೬೬ - ೭೦(66–70)
  • ೭೦ ಕ್ಕೂ ಹೆಚ್ಚು ವರ್ಷಗಳು
  • ಉತ್ತರ ಇಲ್ಲ
 • ನೀವು ಮುಗಿಸಿದ ಶಿಕ್ಷಣದ ಕೊನೆಯ ಹಂತ ಯಾವುದು?
  • ಶಾಲೆಗೆ ಹೋಗಿಲ್ಲ
  • ನರ್ಸರಿಯಿಂದ ೮(8)ನೇ ಇಯತ್ತೆವರೆಗೆ
  • ಪ್ರೌಢಶಾಲೆ , ಆದರೆ ಡಿಪ್ಲೋಮಾ ಇಲ್ಲ
  • ಪ್ರೌಢಶಾಲೆ ಪೂರ್ಣ , ಡಿಪ್ಲೋಮಾ , ಅಥವಾ ಅದಕ್ಕೆ ಸಮಾನ ಶಿಕ್ಷಣ
  • ಕಾಲೇಜು ಮೆಟ್ಟಿಲು ಹತ್ತಿದ್ದಾಗಿದೆ , ಆದರೆ ಪದವಿ ಪಡೆದಿಲ್ಲ
  • ವೃತ್ತಿ ಶಿಕ್ಷಣ / ತಾಂತ್ರಿಕ ಶಿಕ್ಷಣ / ಔದ್ಯೋಗಿಕ ಶಿಕ್ಷಣ
  • ಪದವೀಧರರು
  • ಸ್ನಾತಕೋತ್ತರ ಪದವೀಧರರು
  • ವೃತ್ತಿ ಪದವಿ
  • ಡಾಕ್ಟರೇಟ್ ಪಡೆದಿದ್ದೇನೆ
 • ನೀವು ಸರಾಗವಾಗಿ ಓದಬಲ್ಲ ಮತ್ತು ಬರೆಯಬಲ್ಲ ಭಾಷೆಗಳು ಯಾವುವು?
  • ಅರೇಬಿಕ್
  • ಬೆಂಗಾಲಿ
  • ಇಂಗ್ಲೀಷ್
  • ಫ್ರೆಂಚ್
  • ಗುಜರಾತಿ
  • ಹಿಂದಿ
  • ಇಂಡೋನೇಷಿಯನ್
  • ಕನ್ನಡ
  • ಮಲಯಾಳಂ
  • ಮರಾಠಿ
  • ನೇಪಾಳಿ
  • ಒಡಿಯಾ
  • ಪೋರ್ಚುಗೀಸ್
  • ಪಂಜಾಬಿ
  • ಸ್ಪ್ಯಾನಿಷ್
  • ತಗಲಾಗ್
  • ತಮಿಳು
  • ತೆಲುಗು
  • ಟರ್ಕಿಶ್
  • ವಿಯೆಟ್ನಾಮೀಸ್
  • ಬೇರೆ (ದಯವಿಟ್ಟು ಸ್ಪಷ್ಟಪಡಿಸಿ)
 • ನಿಮ್ಮ ಸಧ್ಯದ ಉದ್ಯೋಗದ ಸ್ಥಿತಿ ಏನು?
  • ಸಂಬಳದ ಉದ್ಯೋಗ
  • ಸ್ವಂತ ಉದ್ಯೋಗ
  • ಕೆಲಸ ಇಲ್ಲ ; ಕೆಲಸ ಹುಡುಕುತ್ತಿರುವೆ
  • ಕೆಲಸ ಇಲ್ಲ ಆದರೆ ಕೆಲಸ ಹುಡುಕುತ್ತಿಲ್ಲ
  • ಗೃಹಿಣಿ
  • ವಿದ್ಯಾರ್ಥಿ
  • ಮನೆಯಲ್ಲಿರುವ ಪಾಲಕರು
  • ಸೈನ್ಯ
  • ನಿವೃತ್ತರು
  • ಕೆಲಸ ಮಾಡಲು ಆಗದವರು
 • ನಿಮ್ಮ ಲಿಂಗ ಯಾವುದು?
  • ಗಂಡು
  • ಹೆಣ್ಣು
  • ಹೇಳುವ ಇಚ್ಛೆಯಿಲ್ಲ
  • ಬೇರೆ ( ದಯವಿಟ್ಟು ಸ್ಪಷ್ಟಪಡಿಸಿ)

ಇಂಟರ್ನೆಟ್ ಬಳಕೆ

 • ಇಂಟರ್ನೆಟ್ ಬಳಕೆಯಲ್ಲಿ ಎಷ್ಟು ಸಮಯ ಖರ್ಚು ಮಾಡುತ್ತೀರಿ?
  • ತಿಂಗಳಿಗೆ ಒಂದು ಗಂಟೆಗೂ ಕಡಿಮೆ
  • ವಾರಕ್ಕೆ ಒಂದು ಗಂಟೆಗೂ ಕಡಿಮೆ
  • ದಿನಕ್ಕೆ ಒಂದು ಗಂಟೆಗೂ ಕಡಿಮೆ
  • ದಿನಕ್ಕೆ ಒಂದು-ಎರಡು ಗಂಟೆ
  • ದಿನಕ್ಕೆ ಮೂರರಿಂದ ಐದು ಗಂಟೆ
  • ದಿನಕ್ಕೆ ಐದು ಗಂಟೆಗೂ ಹೆಚ್ಚು
 • ಇಂಟರ್ನೆಟ್ಟನ್ನು ಬಹುತೇಕ ಎಲ್ಲಿಂದ ಬಳಸುತ್ತೀರಿ?
  • ಮೊಬೈಲ್ ಫೋನಿನಿಂದ
  • ಶಾಲೆಯಲ್ಲಿ
  • ಕೆಲಸದ ಸ್ಥಳದಲ್ಲಿ
  • ಮನೆಯಲ್ಲಿ
  • ಸಾರ್ವಜನಿಕ ಸ್ಥಳಗಳಲ್ಲಿ ( ಇಂಟರ್ನೆಟ್ ಕೆಫೆ , ಗ್ರಂಥಾಲಯ ಮುಂತಾದವು)
  • ಗೆಳೆಯರ ಸ್ಥಳದಿಂದ
  • ಬೇರೆ ( ದಯವಿಟ್ಟು ಸ್ಪಷ್ಟಪಡಿಸಿ)
 • ಇಂಟರ್ನೆಟ್ ಗೆ ಯಾವ ಸಾಧನ ಬಳಸುತ್ತೀರಿ?
  • ಡೆಸ್ಕ್‌ಟಾಪ್
  • ಲ್ಯಾಪ್‌ಟಾಪ್
  • ಟ್ಯಾಬ್ಲೆಟ್
  • ಸ್ಮಾರ್ಟ್ ಫೋನ್
  • ಸಾಮಾನ್ಯ ಫೋನ್ ( ಸ್ಮಾರ್ಟ್ ಫೋನ್ ಅಲ್ಲದ್ದು)
  • ಬೇರೆ ( ದಯವಿಟ್ಟು ಸ್ಪಷ್ಟಪಡಿಸಿ)
 • ಇಂಟರ್ನೆಟ್ಟನ್ನು ಯಾವ ಪ್ರಮುಖ ಉದ್ದೇಶಗಳಿಗಾಗಿ ಬಳಸುತ್ತೀರಿ?
  • ಇ-ಮೇಲ್ ಗಾಗಿ
  • ಸುದ್ದಿಗಾಗಿ
  • ಸಾಮಾಜಿಕ ಜಾಲತಾಣಗಳಿಗಾಗಿ
  • ಬ್ಲಾಗಿಂಗ್‌ಗಾಗಿ
  • ಹುಡುಕುವದಕ್ಕಾಗಿ
  • ಚಾಟ್ ಮಾಡಲು
  • ಆಟಗಳಿಗಾಗಿ
  • ಬೇರೆ ( ದಯವಿಟ್ಟು ಸ್ಪಷ್ಟಪಡಿಸಿ)
 • ನೀವು ಬಳಸುವ ಪ್ರಮುಖ ತಾಣಗಳು ಯಾವುವು?
  • ಫೇಸ್ ಬುಕ್
  • ಯೂಟ್ಯೂಬ್
  • ಗೂಗಲ್
  • ಯಾಹೂ
  • ಬ್ಲಾಗ್ ತಾಣಗಳು
  • ವಿಕಿಪೀಡಿಯಾ
  • ಟ್ವಿಟ್ಟರ್
  • ಬೇರೆ ( ದಯವಿಟ್ಟು ಸ್ಪಷ್ಟಪಡಿಸಿ)
 • ನೀವು ಬಹುಮಟ್ಟಿಗೆ ಬಳಸುವ ಖಾತೆಗಳು ಯಾವುವು?
  • ಫೇಸ್‌ಬುಕ್
  • ಯೂಟ್ಯೂಬ್
  • ಗೂಗಲ್
  • ಎಂ ಎಸ್ ಎನ್
  • ಯಾಹೂ
  • ಬ್ಲಾಗ್ ತಾಣಗಳು
  • ವಿಕಿಪೀಡಿಯಾ
  • ಟ್ವಿಟ್ಟರ್
  • ಇ-ಮೇಲ್ ಖಾತೆಗಳು
  • ಬೇರೆ ( ದಯವಿಟ್ಟು ಸ್ಪಷ್ಟಪಡಿಸಿ)
 • ಇಂಟರ್ನೆಟ್ ನ ವಿಷಯಗಳನ್ನು ಬಹುಮಟ್ಟಿಗೆ ಯಾವ ಭಾಷೆಯಲ್ಲಿ ಓದುತ್ತೀರಿ?
  • ಅರೇಬಿಕ್
  • ಬೆಂಗಾಲಿ
  • ‎ಇಂಗ್ಲೀಷ್
  • ಫ್ರೆಂಚ್
  • ಗುಜರಾತಿ
  • ಹಿಂದಿ
  • ಇಂಡೋನೇಷಿಯನ್
  • ಕನ್ನಡ
  • ಮಲಯಾಳಂ
  • ಮರಾಠಿ
  • ನೇಪಾಳಿ
  • ‎ಒಡಿಯಾ
  • ಪೋರ್ಚುಗೀಸ್
  • ಪಂಜಾಬಿ
  • ಸ್ಪ್ಯಾನಿಷ್
  • ತಗಲಾಗ್
  • ತಮಿಳು
  • ತೆಲುಗು
  • ಟರ್ಕಿಶ್
  • ವಿಯೆಟ್ನಾಮೀಸ್
  • ಬೇರೆ (ದಯವಿಟ್ಟು ಸ್ಪಷ್ಟಪಡಿಸಿ)
 • ಇಂಟರ್ನೆಟ್‌ಗೆ ಸಂಬಂಧಿಸಿದಂತೆ ನಿಮಗೆ ಇರುವ ಮುಖ್ಯ ಸವಾಲುಗಳು ಯಾವುವು? (ಸಂಪರ್ಕ ಸಾಧ್ಯತೆ, ವಿಷಯ, ಖರ್ಚು, ಇತರೆ)
 • ಇಂಟರ್ನೆಟ್‌ನಲ್ಲಿ ಯಾವ ಮಾಹಿತಿ ಅಥವಾ ವಿಷಯವನ್ನು ನೀವು ಹೆಚ್ಚಾಗಿ ಕಾಣಲು ಬಯಸುತ್ತೀರಿ? (ಉ.ದಾ: ಒಂದು ನಿರ್ದಿಷ್ಟ ಭಾಷೆಯಲ್ಲಿ ಹೆಚ್ಚಿನ ಮಾಹಿತಿ, ಒಂದು ನಿರ್ದಿಷ್ಟ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ)?

ಓದುವುದು

 • ನಿಮ್ಮ ಓದಿನ ಮುಖ್ಯ ಮೂಲಗಳು ಏನು?
  • ಪುಸ್ತಕಗಳು
  • ಇ-ಪುಸ್ತಕಗಳು
  • ಬ್ಲಾಗ್‌ಗಳು
  • ಬ್ಲಾಗ್ ಅಲ್ಲದ ಜಾಲತಾಣಗಳು
  • ಇ-ಮ್ಯಾಗಜೀನ್‌ಗಳು
  • ಮ್ಯಾಗಜೀನ್‌ಗಳು
  • ಪತ್ರಿಕೆಗಳು
  • ನಾನು ಅಷ್ಟಾಗಿ ಓದುವುದಿಲ್ಲ
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):
 • ಸಾಮಾನ್ಯವಾಗಿ, ವಾರಕ್ಕೆ ಒಟ್ಟಾರೆ ಎಷ್ಟು ಘಂಟೆಗಳ ಕಾಲ ನೀವು ಓದಲು ಸಮಯವನ್ನು ಕಳೆಯುತ್ತೀರಿ?
  • ದಿನಕ್ಕೆ ಒಂದು ಗಂಟೆಗೂ ಕಡಿಮೆ
  • ೧-೩ ಗಂಟೆಗಳು
  • ೩-೫ ಗಂಟೆಗಳು
  • ೫-೧೦ ಗಂಟೆಗಳು
  • ೧೦-೨೦ ಗಂಟೆಗಳು
  • ೨೦ ಗಂಟೆಗಳಿಗೂ ಹೆಚ್ಚು
 • ಯಾವ ಭಾಷೆಯ ವಿಕಿಪೀಡಿಯಗಳನ್ನು ಸಾಮಾನ್ಯವಾಗಿ ಹೆಚ್ಚು ಓದುತ್ತೀರಿ?
  • ಅರೇಬಿಕ್
  • ಬೆಂಗಾಲಿ
  • ‎ಇಂಗ್ಲೀಷ್
  • ಫ್ರೆಂಚ್
  • ಗುಜರಾತಿ
  • ಹಿಂದಿ
  • ಇಂಡೋನೇಷಿಯನ್
  • ಕನ್ನಡ
  • ಮಲಯಾಳಂ
  • ಮರಾಠಿ
  • ನೇಪಾಳಿ
  • ‎ಒಡಿಯಾ
  • ಪೋರ್ತುಗೀಸ್
  • ಪಂಜಾಬಿ
  • ಸ್ಪ್ಯಾನಿಷ್
  • ತಗಲಾಗ್
  • ತಮಿಳು
  • ತೆಲುಗು
  • ಟರ್ಕಿಶ್
  • ವಿಯೆಟ್ನಾಮೀಸ್
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):
 • ಅನ್ವಯಿಸಿದರೆ, ಇನ್ಯಾವ ವಿಕಿಮೀಡಿಯಾದ ಇತರೆ ಸ್ವತಂತ್ರ ಜ್ಞಾನಾಧಾರಿತ ತಾಣಗಳನ್ನು ನೀವು ಓದುತ್ತೀರಿ?
  • ವಿಕಿಸೋರ್ಸ್
  • ವಿಕಿಕೋಟ್
  • ವಿಕಿಬುಕ್ಸ್
  • ವಿಕ್ಷನರಿ
  • ವಿಕಿನ್ಯೂಸ್
  • ವಿಕಿವರ್ಸಿಟಿ
  • ಕಾಮನ್ಸ್
  • ವಿಕಿಸ್ಪೀಶೀಸ್
  • ವಿಕಿವಾಯೇಜ್
  • ಇವುಗಳ ಬಗ್ಗೆ ಕೇಳಿದಂತಿಲ್ಲ.
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):
 • ವಿಕಿಪೀಡಿಯವನ್ನು ಆಫ್‌ಲೈನ್ ವಿಧಾನದಲ್ಲಿ ಯಾವಾಗಲಾದರೂ ಬಳಸಿದ್ದೀರಾ?
  • ಹೌದು, ನಾನಿದನ್ನು ಈ ಮೊದಲು ಬಳಸಿದ್ದೇನೆ
  • ಹೌದು, ಆದರೆ ನನಗಿದು ಬೇಕಿಲ್ಲ
  • ಇಲ್ಲ, ಆದರೆ ನಾನಿದರ ಬಗ್ಗೆ ಕೇಳಿದ್ದೇನೆ
  • ಇಲ್ಲ, ನಾನಿದರ ಬಗ್ಗೆ ಕೇಳಿಲ್ಲ
  • ನನಗೆ ಇದು ಲಭ್ಯವಿದೆ, ಆದರೆ ನಾನದನ್ನು ಬಳಸಿಕೊಳ್ಳುತ್ತಿಲ್ಲ
 • ಯಾವ ಆಫ್‌ಲೈನ್ ವಿಧಾನವನ್ನು ನೀವು ಬಳಸಿದ್ದೀರಿ?
  • ಓಕವಿಕ್ಸ್
  • ಒಂದು ಆಫ್‌ಲೈನ್ ವಿಕಿಪೀಡಿಯ ಆಪ್
  • ಒನ್ ಲ್ಯಾಪ್ಟಾಪ್ ಪರ್ ಚೈಲ್ಡ್‌ನ (ಒಎಲ್‌ಪಿಸಿ) ವಿಕಿಪೀಡಿಯ ಆಪ್
  • ಕ್ಸೋವಾ
  • ನನ್ನ ಕಂಪ್ಯೂಟರಿನಲ್ಲಿದು ಮುಂಚಿತವಾಗಿಯೇ ಸ್ಥಾಪಿತಗೊಂಡಿದೆ
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):
 • ಈ ಕೆಳಗಿನ ಅಂಶಗಳನ್ನು ನೀವು ವಿಕಿಪೀಡಿಯದಲ್ಲಿ ಹೇಗೆ ನಿರ್ಧರಿಸುತ್ತೀರಿ?
  • ಓದಿಸಿಕೊಳ್ಳುವಿಕೆ
  • ವಿಷಯಗಳ ವಿಸ್ತಾರ
  • ಮಾಹಿತಿಯ ಆಳ
  • ಮಾಹಿತಿಯ ವಿಶ್ವಾಸಾರ್ಹತೆ
  • ವಿನ್ಯಾಸ (ಜಾಲದ ಇಂಟರ್‌ಫೇಸ್)
  • ವಿಕಿಪೀಡಿಯ ನೀತಿಗಳು - ಸಹಾಯ ಪುಟಗಳು
  • ಒಟ್ಟಿನಲ್ಲಿ
 • ನೀವು ಇನ್ಯಾವುದಾದರೂ ಆನ್‌ಲೈನ್ ವಿಶ್ವಕೋಶವನ್ನು ಬಳಸುತ್ತೀರಾ? ಹಾಗಿದ್ದಲ್ಲಿ, ಅದರ ಮುಖಪುಟದ ಕೊಂಡಿಯನ್ನು ಸೇರಿಸಿ.
 • ವಿಕಿಪೀಡಿಯಾವನ್ನು ನಿಮ್ಮದೇ ಮಾತುಗಳಲ್ಲಿ ಹೇಗೆ ವಿವರಿಸುತ್ತೀರಿ?
 • ವಿಕಿಪೀಡಿಯಾ / ವಿಕಿಮೀಡಿಯಾವನ್ನು ಸದ್ಯಕ್ಕೆ ನೀವು ಹೇಗೆ ಬಳಸುತ್ತಿದ್ದೀರಿ? ( ಅನ್ವಯವಾಗುವ ಎಲ್ಲವನ್ನೂ ಆಯ್ದುಕೊಳ್ಳಿ )
  • ನನ್ನ ಶಾಲೆಯ ಅಸೈನ್ಮೆಂಟುಗಳಿಗಾಗಿ ಮಾಹಿತಿಯ ಹುಡುಕಾಟಕ್ಕೆ
  • ನನ್ನ ಕೆಲಸಕ್ಕಾಗಿ ಮಾಹಿತಿಯ ಹುಡುಕಾಟಕ್ಕೆ
  • ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಸತ್ಯವನ್ನು ಕಂಡುಕೊಳ್ಳುವುದಕ್ಕಾಗಿ
  • ನನ್ನ ವೈಯುಕ್ತಿಕ ಕುತೂಹಲದ ಸಂಗತಿಗಳ ಕುರಿತು ಓದುವುದಕ್ಕಾಗಿ
  • ಬೇರೆ ರೀತಿಯಲ್ಲಿ (ನೀವು ಹೇಗೆ ವಿಕಿಪೀಡಿಯಾ/ವಿಕಿಮೀಡಿಯಾ ಬಳಸುವಿರಿ ಎಂಬುದನ್ನು ದಯವಿಟ್ಟು ವಿವರಿಸಿ)
 • ವಿಕಿಪೀಡಿಯಾ/ವಿಕಿಮೀಡಿಯಾವನ್ನು ಎಷ್ಟು ಸಲ ನೀವು ಬಳಸುತ್ತೀರಿ?
  • ತಿಂಗಳಿಗೆ ಒಂದು ಬಾರಿಗೂ ಕಡಿಮೆ
  • ತಿಂಗಳಿಗೆ ೧ - ೩ ಗಂಟೆಗಳು
  • ತಿಂಗಳಿಗೆ ೪ - ೫ ಬಾರಿ (ವಾರಕ್ಕೆ ಒಮ್ಮೆ)
  • ವಾರಕ್ಕೆ ೧ - ೩ ಬಾರಿ
  • ವಾರಕ್ಕೆ ೪ - ೫ ಬಾರಿ
  • ತಿಂಗಳಿಗೆ ೬ - ೭ ಬಾರಿ (ದಿನಕ್ಕೊಮ್ಮೆ)
  • ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ
 • ವಿಕಿಪೀಡಿಯಾ ಕುರಿತಾದ ಒಂದು ಸಂಗತಿಯನ್ನು ನೀವು ಉತ್ತಮಪಡಿಸಬಹುದಾಗಿದ್ದಲ್ಲಿ - ಉದಾಹರಣೆಗೆ ಅದರ ಕಾರ್ಯನೀತಿ ಅಥವಾ ಅದರ ವಿಷಯವ್ಯಾಪ್ತಿ - ಅದು ಯಾವುದು?

ಕೊಡುಗೆ ನೀಡುವುದು

 • ವಿಕಿಪೀಡಿಯಾಗೆ ನಿಮ್ಮ ಕೊಡುಗೆಯ ಬಗೆಯನ್ನು ಯಾವುದು ಚೆನ್ನಾಗಿ ವರ್ಣಿಸುತ್ತದೆ?
  • ನಾನು ಹೊಸ ಲೇಖನಗಳನ್ನು ಬರೆಯುತ್ತೇನೆ.
  • ನಾನು ಈಗಾಗಲೇ ಇರುವ ಲೇಖನಗಳಿಗೆ ಮಾಹಿತಿ ತುಂಬುತ್ತೇನೆ.
  • ನಾನು ಲೇಖನಗಳ ಶೈಲಿ , ವ್ಯಾಕರಣ , ಪದಪ್ರಯೋಗ ಇಲ್ಲವೆ ಇತರ ಚಿಕ್ಕಪುಟ್ಟ ತಿದ್ದುಪಡಿಗಳನ್ನು ಮಾಡುತ್ತೇನೆ.
  • ನಾನು ಅನುವಾದದ ಕೆಲಸವನ್ನು ಮಾಡುತ್ತೇನೆ.
  • ನಾನು ವಿಕಿಮೀಡಿಯಾ ಕಾಮನ್ಸ್ ಗೆ ಛಾಯಾಚಿತ್ರ ಮತ್ತು ಬಹುಮಾಧ್ಯಮ ಮಾಹಿತಿಗಳನ್ನು ಒದಗಿಸುತ್ತೇನೆ.
  • ವಿಧ್ವಂಸಕಕಾರ್ಯಗಳು, ಹಕ್ಕುಸ್ವಾಮ್ಯ ಉಲ್ಲಂಘನೆ ಅಥವಾ ಇತರ ಲೇಖನಸಂಬಂಧಿ ಸಮಸ್ಯೆಗಳನ್ನು ಗಮನಿಸುತ್ತಿರುತ್ತೇನೆ
  • ನಾನು ಓದುಗರ ಪ್ರಶ್ನೆಗಳಿಗೆ ಮತ್ತು ದೂರುಗಳಿಗೆ ಉತ್ತರಿಸುತ್ತೇನೆ
  • ನಾನು ಸ್ವಯಂಸೇವಕರ ನಡುವಿನ ವಿವಾದಗಳನ್ನು ಬಗೆಹರಿಸುತ್ತೇನೆ

ನಾನು ಕಾರ್ಯಕ್ರಮಗಳು, ಕಾರ್ಯಾಗಾರಗಳು, ಸಮ್ಮಿಲನಗಳು ಅಥವಾ ವಾರ್ಷಿಕ ವಿಕಿಮೇನಿಯಾ ಸಮ್ಮೇಳನಗಳನ್ನು ಸಂಘಟಿಸಲು ಸಹಾಯ ಮಾಡುತ್ತೇನೆ .

  • ವಿಕಿಮೀಡಿಯದ ಹೊರಗೆ ನಾನು ಸಾರ್ವಜನಿಕ ಕಾರ್ಯಾಗಾರ ಅಥವಾ ವಕಾಲತ್ತು ವಹಿಸಿಕೊಳ್ಳುತ್ತೇನೆ.
  • ನಾನು ಬಾಟ್-ಗಳನ್ನು ಅಥವಾ ಸಾಧನಗಳ ನಿರ್ವಹಣೆಯಂತಹ ತಾಂತ್ರಿಕ ಕೆಲಸಗಳನ್ನು ಮಾಡುತ್ತೇನೆ
  • ನಾನು ಸಂಘ(ಚಾಪ್ಟರ್)ನಲಿ ಭಾಗವಹಿಸುತ್ತೇನೆ.
  • ನಾನು ಲೇಖನಗಳ ಚರ್ಚೆಯಲ್ಲಿ ಭಾಗವಹಿಸುತ್ತೇನೆ.
  • ನಾನು ನೀತಿಗಳನ್ನು, ಮಾರ್ಗದರ್ಶನ ಸೂತ್ರಗಳನ್ನು ಮತ್ತು ಇವನ್ನು ಹೋಲುವ ಸಮುದಾಯದ ಇತರೆ ಪ್ರಕ್ರಿಯೆಗಳನ್ನು ಅಭಿವೃದ್ಧಿ ಪಡಿಸಿ, ನಿರ್ವಹಿಸುತ್ತೇನೆ.
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):
 • ಅನ್ವಯಿಸಿದರೆ, ಇನ್ಯಾವ ವಿಕಿಮೀಡಿಯಾದ ಇತರೆ ಸ್ವತಂತ್ರ ಜ್ಞಾನಾಧಾರಿತ ತಾಣಗಳನ್ನು ನೀವು ಓದುತ್ತೀರಿ?
  • ವಿಕಿಸೋರ್ಸ್
  • ವಿಕಿಕೋಟ್
  • ವಿಕಿಬುಕ್ಸ್
  • ವಿಕ್ಷನರಿ
  • ವಿಕಿನ್ಯೂಸ್
  • ವಿಕಿವರ್ಸಿಟಿ
  • ಕಾಮನ್ಸ್
  • ವಿಕಿಸ್ಪೀಶೀಸ್
  • ವಿಕಿವಾಯೇಜ್
  • ವಿಕಿಡೇಟ
  • ಮೇಲಿನದರಲ್ಲಿ ಯಾವುದೂ ಅಲ್ಲ
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):
 • ವಿಕಿಪೀಡಿಯ ತಾಣಗಳಲ್ಲಿ ಎಷ್ಟು ಸಮಯ ಸಂಪಾದನೆಯಲ್ಲಿ ತೊಡಗುತ್ತೀರಿ?
  • ತಿಂಗಳಿಗೆ ಒಂದು ಗಂಟೆಗೂ ಕಡಿಮೆ
  • ತಿಂಗಳಿಗೆ ೧ - ೩ ಗಂಟೆಗಳು
  • ವಾರಕ್ಕೆ ೧ - ೩ ಗಂಟೆಗಳು
  • ದಿನಕ್ಕೆ ೧ - ೨ ಗಂಟೆಗಳು
  • ದಿನಕ್ಕೆ ೩ - ೪ ಗಂಟೆಗಳು
  • ದಿನಕ್ಕೆ ೪ ಗಂಟೆಗಳಿಗೂ ಹೆಚ್ಚು
 • ನಿಮ್ಮ ಮೂಲ ವಿಕಿಯಲ್ಲಿ ಬಳಕೆದಾರರು ತಮ್ಮತಮ್ಮಲ್ಲಿ ಹೇಗೆ ಪರಸ್ಪರ ಪ್ರತಿಕ್ರಿಯಿಸುತ್ತಾರೆ?
  • ವಿಲೇಜ್ ಪಂಪ್ (ಅರಳಿಕಟ್ಟೆ)
  • ಲೇಖನದ ಚರ್ಚಾ ಪುಟಗಳು
  • ಬಳಕೆದಾರರ ಚರ್ಚಾ ಪುಟಗಳು
  • ಯೋಜನಾ ಪುಟಗಳು
  • ಮೇಲಿಂಗ್ ಲಿಸ್ಟ್‌ಗಳು
  • ಸೋಶಿಯಲ್ ಮೀಡಿಯ (ಫೇಸ್‌ಬುಕ್, ಗೂಗಲ್ ಗ್ರೂಪ್ಸ್, ಇತರೆ)
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):
 • ಕೆಳಗಿನ ಯಾವುದು ನಿಮ್ಮ ಭಾಷೆ ಮತ್ತು ನೀವು ಬಳಸುವ ತಂತ್ರಜ್ಞಾನಕ್ಕೆ ಅನ್ವಯಿಸುತ್ತದೆ?
  • ನನ್ನ ಭಾಷೆಗೆ ಆಪರೇಟಿಂಗ್ ಸಿಸ್ಟಂ ಬೆಂಬಲವಿಲ್ಲ
  • ನನ್ನ ಭಾಷೆಗೆ ಕೀಬೋರ್ಡ್ ಬೆಂಬಲವಿಲ್ಲ
  • ನನ್ನ ಭಾಷೆಗೆ ಬ್ರೌಸರ್ ಬೆಂಬಲವಿಲ್ಲ
  • ನನ್ನ ಭಾಷೆಗೆ ತಂತ್ರಜ್ಞಾನದ ಬೆಂಬಲದ ವಿಷಯದಲ್ಲಿ ನನಗೆ ಯಾವುದೇ ಸಮಸ್ಯೆಗಳು ಇಲ್ಲ.
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):
 • ನೀವು ಹೆಚ್ಚು ಕೊಡುಗೆ ಕೊಡುವಲ್ಲಿ ಯಾವ ವಿಷಯಗಳು ಸಹಾಯಕವಾಗಬಹುದು?
  • ತಿದ್ದುಪಡಿಗಳನ್ನು ಹೇಗೆ ಮಾಡಬೇಕು ಎಂಬಲ್ಲಿ ಯಾರಿಂದಲಾದರೂ ಸಹಾಯ ಸಿಗುವುದು
  • ಚರ್ಚಾಪುಟಗಳಲ್ಲಿನ ನನ್ನ ಪ್ರಶ್ನೆಗೆ ಉತ್ತರಗಳನ್ನು ಪಡೆಯುವುದು
  • ವಿಕಿಪೀಡಿಯಾ ಕಾರ್ಯನೀತಿಗಳು ಮತ್ತು ಸಮುದಾಯನೀತಿಗಳ ಕುರಿತಾದ ಸಹಾಯ ಪಡೆಯುವುದು
  • ಸಂಪಾದನೆಯ ಸುಧಾರಿತ ಇಂಟರ್ಫೇಸ್
  • ನನ್ನ ಕಾಣಿಕೆಗಳನ್ನು ಉಳಿದ ವಿಕಿಮೀಡಿಯನ್ನರು ಸ್ವಾಗತಿಸುವುದು
  • ನನ್ನ ಕಾಣಿಕೆಗಳಿಗಾಗಿ ಮೆಚ್ಚುಗೆಯನ್ನು ಪಡೆಯುವುದು
  • ನನ್ನ ಕಾಣಿಕೆಗಳನ್ನು ಅಳಿಸಲಾಗುವುದಿಲ್ಲ ಎಂಬ ವಿಶ್ವಾಸ
  • ನನ್ನ ಕಾಣಿಕೆಗಳಿಂದ ಉಳಿದವರಿಗೆ ಲಾಭ ಆಗುವುದೆಂಬ ತಿಳಿವಳಿಕೆ
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):
 • ನಿಮ್ಮ ಭಾಷೆಯಲ್ಲಿನ ಪುಟದ ಆರಂಭಕ್ಕೆ ಬೇರೆ ಭಾಷೆಯಲ್ಲಿ ಚೆನ್ನಾಗಿ ಬರೆದ ಲೇಖನಗಳನ್ನು ಅನುವಾದಕ್ಕಾಗಿ ಬಳಸುತ್ತೀರಾ?
  • ಪದೇ ಪದೇ
  • ಕೆಲವೊಮ್ಮೆ
  • ಯಾವಾಗಲೋ ಒಮ್ಮೆ
  • ಯಾವಾಗಲೂ ಇಲ್ಲ
 • ಇಂಗ್ಲೀಷ್ ಹೊರತಾದ ಭಾಷೆಗಳಲ್ಲಿ ಸಂಪಾದನೆ ಮಾಡುವಾಗ ನಿಮ್ಮ ಅನುಭವದ ರೂಪುರೇಖೆಗಳನ್ನು ಕೊಡಬಲ್ಲಿರಾ? ( ಉದಾ. ಕನ್ನಡದಲ್ಲಿ ಟೈಪಿಸುವಾಗ ಸಾಮಾನ್ಯವಾಗಿ ನೀವು ಎದುರಿಸುವ ತೊಂದರೆಗಳೇನು ?)
 • ನೀವು ಬಯಸುವ ಸಾಧನ-ಸಲಕರಣೆಗಳು ( ಉದಾ. ಕಾಗುಣಿತ -ಪರೀಕ್ಷಕ , ತಂತಾನೇ-ಪೂರ್ತಿಮಾಡುವ ಸಾಧನ-ಸಲಕರಣೆಗಳು)
 • ನೀವು ಎಂತಹ ಚಳುವಳಿಯ ಬೆಂಬಲವನ್ನು ಬಯಸುವಿರಿ?
  • ವಿಕಿಪೀಡಿಯಾ ಬಳಕೆದಾರ ಗುಂಪು /ಘಟಕವೊಂದನ್ನು ನನ್ನ ಜಾಗದಲ್ಲಿ ಆರಂಭಿಸುವುದು
  • ನನ್ನ ವಿಕಿಪೀಡಿಯಾ ಖರ್ಚುಗಳನ್ನು ಸರಿದೂಗಿಸಲು ಧನಸಹಾಯ
  • ಹೊಸ ಕಲ್ಪನೆಗಳನ್ನು ಪರೀಕ್ಷಿಸಲು ನನಗೆ ಧನಸಹಾಯ
  • ವಿಕಿಪೀಡಿಯಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶಿಷ್ಯವೇತನ
  • ವಿಕಿಪೀಡಿಯಾ ಶಿಕ್ಷಣ ಕಾರ್ಯಕ್ರಮವನ್ನು ನನ್ನ ಶಾಲೆ/ಕಾಲೇಜಿನಲ್ಲಿ ನಡೆಸುವುದು
  • ಸ್ಥಳೀಯ ವಸ್ತುಸಂಗ್ರಹಾಲಯ/ಗ್ರಂಥಾಲಯಗಳೊಂದಿಗೆ ಸಹಯೋಗದ ಏರ್ಪಾಟು
  • ಯಾವುದೂ ಬೇಡ, ನನಗೆ ಯಾವುದೇ ಬೆಂಬಲದ ಅಗತ್ಯವಿಲ್ಲ
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):
 • ವಿಕಿಪೀಡಿಯ ಸಂಪಾದನೆಗೆ ನಿಮ್ಮನ್ನು ಮೊಟ್ಟಮೊದಲಿಗೆ ಪ್ರೇರೇಪಿಸಿದ ಅಂಶವೇನು?
  • ನಾನೊಂದು ದೋಷವನ್ನು ಗಮನಿಸಿದೆ ಮತ್ತು ಅದನ್ನು ಸರಿಪಡಿಸಬಯಸಿದೆ
  • ಒಂದು ಲೇಖನದ ವಿಷಯ ಇಲ್ಲದಿರುವುದನ್ನು ನಾನು ಗಮನಿಸಿದೆ, ಆದ್ದರಿಂದ ಅದನ್ನು ಸೃಷ್ಟಿಸಿದೆ
  • ನಾನೊಂದು ಹೊಸ ಕೌಶಲವನ್ನು ಕಲಿಯಬೇಕೆಂದಿದ್ದೆ
  • ನಾನು ಇಂಟರ್ನೆಟ್‌ನಲ್ಲಿಯ ಸ್ವತಂತ್ರ ಜ್ಞಾನಕ್ಕೆ ನನ್ನ ಕೊಡುಗೆ ನೀಡಬೇಕೆಂದಿದ್ದೆ
  • ನಾನು ನನ್ನ ಭಾಷೆಯಲ್ಲಿ ಮಾಹಿತಿಯನ್ನು ಒದಗಿಸಬೇಕು ಎಂದುಕೊಂದಿದ್ದೆ
  • ನನ್ನ ಸ್ನೇಹಿತ ಅಥವಾ ಸಹವರ್ತಿ ನನ್ನಲ್ಲಿ ಆಸಕ್ತಿ ಮೂಡಿಸಿದ
  • ವಿಕಿಪೀಡಿಯಾ ಸಂಪಾದನೆ ಕುರಿತಾದ ಒಂದು ಸಮ್ಮೇಳನ /ಉಪನ್ಯಾಸಕ್ಕೆ ನಾನು ಹೋಗಿದ್ದೇನೆ.
  • ನಾನು ನನ್ನ ಶಾಲೆ/ಕಾಲೇಜ್/ವಿಶ್ವವಿದ್ಯಾಲಯದ ಅಸೈನ್ಮೆಂಟಿನ ಅಂಗವಾಗಿ ಸಂಪಾದನೆಯನ್ನು ಆರಂಭಿಸಿದೆ
  • ಇತರೆ (ದಯವಿಟ್ಟು ಸ್ಪಷ್ಟಪಡಿಸಿ):

ಶರತ್ತಿನ

 • ನೀವು ವಿಕಿಪೀಡಿಯದ ಶೈಕ್ಷಣಿಕ ಕಾರ್ಯಕ್ರಮದ ಬಗ್ಗೆ ಕೇಳಿದ್ದೀರಾ?
  • ಹೌದು, ನಾನು ಕೇಳಿದ್ದೇನೆ ಮತ್ತು ನಾನದರಲ್ಲಿ ಭಾಗವಹಿಸಿದ್ದೇನೆ
  • ಹೌದು , ಆ ಬಗ್ಗೆ ಕೇಳಿದ್ದೇನೆ ಮತ್ತು ನಾನದರಲ್ಲಿ ಭಾಗವಹಿಸಿದ್ದೇನೆ
  • ಹೌದು, ಆ ಬಗ್ಗೆ ಕೇಳಿದ್ದೇನೆ, ವಿಕಿಪೀಡಿಯಾವನ್ನು ಶಿಕ್ಷಣದಲ್ಲಿ ಬಳಸಕೂಡದು ಎಂದು ನನ್ನ ಅನಿಸಿಕೆ
  • ಇಲ್ಲ, ಅದರ ಬಗ್ಗೆ ಕೇಳಿಲ್ಲ , ಆದರೆ ಅದು ಒಳ್ಳೆಯ ವಿಚಾರ ಎನಿಸುತ್ತದೆ
  • ಇಲ್ಲ , ಆ ಬಗ್ಗೆ ನಾನು ಕೇಳಿಲ್ಲ , ವಿಕಿಪೀಡಿಯಾವನ್ನು ಶಿಕ್ಷಣದಲ್ಲಿ ಬಳಸಕೂಡದು ಎಂದು ನನ್ನ ಅನಿಸಿಕೆ
 • ವಿಕಿಪೀಡಿಯಾವನ್ನು ನೋಡಲು ಮೊಬೈಲ್ ನ ಡಾಟಾ ದರಗಳು ನಿಮಗೆ ಅಡ್ಡಿಯಾಗಿವೆಯೇ?
  • ಹೌದು
  • ಇಲ್ಲ , ನನಗೆ ಉಚಿತ ವೀಕ್ಷಣೆಯನ್ನು ಕೊಡುವ ಡಾಟಾ-ಪ್ಲ್ಯಾನ್ ನನಗಿದೆ
  • ಇಲ್ಲ , ನನ್ನ ಡಾಟಾ-ಪ್ಲ್ಯಾನ್ ಕೇವಲ ವಿಕಿಪೀಡಿಯಾ ವೀಕ್ಷಣೆಯನ್ನು ಒದಗಿಸುತ್ತದೆ, ಆದರೆ ಉಳಿದ ತಾಣಗಳನ್ನು ನೋಡಲು ನಾನು ಹಣ ತೆರಬೇಕು
 • ನಿಮ್ಮ ಡೇಟಾ ಪ್ಲಾನ್ ಯಾವುದು?
  • ಅನಿಯಮಿತ ಪ್ರವೇಶ
  • ನಿಯಮಿತ ಡೇಟಾ ಪ್ಲಾನ್ (ತಿಂಗಳ ಡೇಟಾ ಮಿತಿ ಏನು?)

ಬ್ಯಾನರ್

 • ಇಲ್ಲಿ ಕ್ಲಿಕ್ಕಿಸುವ ಮೂಲಕ ದಯವಿಟ್ಟು ೨೦೧೪ರ ದಕ್ಷಿಣಗೋಲಾರ್ಧಸ ಅಭಿಪ್ರಾಯಸಂಗ್ರಹಣೆಯಲ್ಲಿ ಪಾಲ್ಗೊಂಡು ವಿಕಿಪೀಡಿಯಾ ಕುರಿತಾದ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ , ಮತ್ತು ವಿಕಿಪೀಡಿಯಾವನ್ನು ಉತ್ತಮಪಡಿಸಲು ನೆರವಾಗಿ
 • ನೀವು ಈ ಅಬಿಪ್ರಾಯಸಂಗ್ರಹಣವನ್ನು ಯಾವಾಗ ಬೇಕಾದರೂ ಅರ್ಧಕ್ಕೆ ನಿಲ್ಲಿಸಿ ನಂತರ ಪೂರ್ತಿಗೊಳಿಸಬಹುದು , ಆದರೆ ಈ ಸಂದೇಶವನ್ನು ಇದೊಂದೇ ಸಲ ನೀವು ನೋಡಬಹುದು .